ದುಬೈ: ಪೂರನ್ ಏಕಾಂಗಿ ಹೋರಾಟದ ಅರ್ಧಶತಕ ಹೊರತುಪಡಿಸಿ ನಾಯಕ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಸೇರಿ ಎಲ್ಲ ಆಟಗಾರರ ಬ್ಯಾಟಿಂಗ್ ವೈಫಲ್ಯದ ಪರಿಣಾಮ ಸನ್ರೈಸರ್ಸ್ ಹೈದರಾಬಾದ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 69 ರನ್ಗಳ ವಿರುದ್ಧ ಗೆದ್ದು ಬೀಗಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 22ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಹೈದರಾಬಾದ್ ತಂಡವು 202 ರನ್ಗಳ ಗುರಿ ನೀಡಿತ್ತು. ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಕೆಎಲ್ ರಾಹುಲ್ ಪಡೆ 16.4 ಓವರ್ಗಳಲ್ಲಿ ಸರ್ವಪತನದೊಂದಿಗೆ ಕೇವಲ 132 ರನ್ ಗಳಿಸಲು ಶಕ್ತವಾಯಿತು. ಪಂಜಾಬ್ ಪರ ಪೂರನ್ 77 ರನ್ ಚೆಚ್ಚಿದರು. ಆದರೆ ಉಳಿದ ಎಲ್ಲ ಆಟಗಾರರು ಕೇವಲ 15 ರನ್ಗಳ ಗಡಿ ದಾಟುವಲ್ಲಿ ವಿಫಲರಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿತ್ತು. ಹೈದರಾಬಾದ್ ಪರ ಜಾನಿ ಬೈರ್ಸ್ಟೋ 97 ರನ್, ಡೇವಿಡ್ ವಾರ್ನರ್ 52 ರನ್ ಹಾಗೂ ಕೇನ್ ವಿಲಿಯಮ್ಸನ್ ಔಟಾಗದೆ 20 ರನ್ ಸಿಡಿಸಿದ್ದರು. ಆದರೆ ಬಳಿಕ ಬಂದ ಅಬ್ದುಲ್ ಸಮದ್ (8 ರನ್), ಮನೀಷ್ ಪಾಂಡೆ (1 ರನ್), ಪ್ರಿಯಂ ಗಾರ್ಗ್ (0 ರನ್), ಅಭಿಷೇಕ್ ಶರ್ಮ (12 ರನ್) ಬಹುಬೇಗ ವಿಕೆಟ್ ಕಳೆದುಕೊಂಡಿದ್ದರು.
PublicNext
08/10/2020 11:34 pm