ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವೈಫಲ್ಯದ ಪರಿಣಾಮ ಕಿಂಗ್ಸ್ ಇಲೆವೆನ್ ಪಂಜಾಬ್ 97 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ದುಬೈನ ಐಸಿಸಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಆರ್ಸಿಬಿ 17ನೇ ಓವರಿನಲ್ಲಿ ಕೇವಲ 109 ರನ್ಗಳಿಗೆ ಸರ್ವಪತನ ಕಂಡಿತು. ಆರ್ಸಿಬಿಯ ನಾಯಕ ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ಶಿವಂ ದುಬೆ ಸೇರಿದಂತೆ ಏಳು ಜನ ಆಟಗಾರರು ಎರಡಂಕಿ ದಾಟುವಲ್ಲಿ ವಿಫಲರಾದರು. ಇದರಿಂದಾಗಿ ಪಂಜಾಬ್ ತಂಡ ನೀಡಿದ್ದ 207 ರನ್ಗಳ ಗುರಿ ಪೇರಿಸುವಲ್ಲಿ ಕೊಹ್ಲಿ ಪಡೆ ವಿಫಲವಾಯಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಕೆಎಲ್ ರಾಹುಲ್ 132 ರನ್ (69 ಎಸೆತ, 14 ಬೌಂಡರಿ, 7 ಸಿಕ್ಸರ್) ಹಾಗೂ ಮಯಾಂಕ್ ಅಗರ್ವಾಲ್ 26 ರನ್ (20 ಎಸೆತ 4 ಬೌಂಡರಿ) ಗಳ ಸಹಾಯದಿಂದ 3 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತ್ತು.
PublicNext
24/09/2020 11:19 pm