ಅಬುಧಾಬಿ: ಶೇಖ್ ಝಯೀದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 20ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 57 ರನ್ಗಳ ಭರ್ಜರಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗಿಂತ ಮೊದಲೇ ಕ್ರುನಾಲ್ ಬ್ಯಾಟಿಂಗ್‌ಗೆ ಇಳಿದು ಟ್ರೋಲ್ ಆಗಿದ್ದಾರೆ.
ಕ್ರುನಾಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ನಂತರ ಅವರ ಮುಖಭಾವ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು, ಅಭಿಮಾನಿಗಳು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. 'ಬೆಳಗ್ಗೆ ಚಾಯ್ ಕುಡಿಯುವುದಕ್ಕೂ ಮುನ್ನ ನನ್ನ ಮೂಡ್ ಹೀಗಿರುತ್ತೆ' ಎಂದು ನೆಟ್ಟಿದರೊಬ್ಬರು ಕಾಲೆಳೆದಿದ್ದಾರೆ. ಮತ್ತೊಬ್ಬರು 'ಬೌಂಡರಿ ಹೊಡೆಯಲು ನಿಮ್ಮನ್ನು ಪ್ರೇರೇಪಿಸಲು ಚೀಯರ್ ಲೀಡರ್ಸ್ ಇಲ್ಲದಿದ್ದಾಗ ಹೀಗೆ ಆಗುತ್ತದೆ" ಎಂದು ಬರೆದುಕೊಂಡಿದ್ದಾರೆ. 'ರವಿಶಾಸ್ತ್ರಿ ಅಕಾಡೆಮಿಗೆ ಸ್ವಾಗತ' ಎಂದು ಕೆಲ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
PublicNext
07/10/2020 04:53 pm