ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಔಟ್ ಎಂದ್ರೇ ಔಟ್ ಅಷ್ಟೇ'- ಧೋನಿಗೆ ಸಾಕ್ಷಿ ಬೆಂಬಲ

ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ನೀಡಿದ್ದ ಶಾರ್ಟ್ ರನ್ ನಿರ್ಧಾರದ ಭಾರೀ ಟೀಕೆಗೆ ಗುರಿಯಾಗಿತ್ತು. ಈ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಇಂತಹದ್ದೇ ಘಟನೆ ಮರುಕಳಿಸಿದೆ.

ಆರ್‌ಆರ್‌ ಇನ್ನಿಂಗ್ಸ್ ನ 18ನೇ ಓವರ್‌ನ ದೀಪಕ್ ಚಹರ್ ಬೌಲಿಂಗ್‌ನಲ್ಲಿ ಟಾಮ್ ಕರ್ರನ್ ವಿಕೆಟ್ ಕೀಪರ್‍ಗೆ ಕ್ಯಾಚ್ ನೀಡಿದ್ದರು. ಈ ವೇಳೆ ಕ್ಯಾಚ್ ಪಡೆದ ಧೋನಿ ಅಂಪೈರ್‌ಗೆ ಔಟ್ ಮನವಿ ಮಾಡಿದ್ದರು. ಈ ಮನವಿಯನ್ನು ಸ್ವೀಕರಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಅಂಪೈರ್ ತೀರ್ಮಾನದಿಂದ ಶಾಕ್‌ಗೆ ಒಳಗಾದ ಬ್ಯಾಟ್ಸ್‌ಮನ್ ತೀರ್ಪು ಮರುಪರಿಶೀಲನೆ ಮಾಡಲು ಮನವಿ ಮಾಡಿದ್ದರು. ಆದರೆ ಅದಾಗಲೇ ಇದ್ದ ರಿವ್ಯೂ ಅವಕಾಶವನ್ನು ರಾಜಸ್ಥಾನದ ತಂಡದ ರಾಹುಲ್ ತಿವಾಟಿಯಾ ಬಳಸಿಕೊಂಡಿದ್ದ ಕಾರಣ ಅಂಪೈರ್ ಕರ್ರನ್ ಅವರನ್ನು ಹೊರ ನಡೆಯುವಂತೆ ಸೂಚಿಸಿದ್ದರು.

ಆದರೆ ತಕ್ಷಣ ತೀರ್ಪು ಮರುಪರಿಶೀಲನೆ ಮಾಡಲು ನಿರ್ಧರಿಸಿದ್ದ ಅಂಪೈರ್, ಕ್ಯಾಚ್ ಕಂಪ್ಲೀಟ್ ಆಗಿದೆಯಾ ಎಂದು ಮೂರನೇ ಅಂಪೈರ್ ಸಹಾಯ ಕೋರಿದ್ದರು. ಈ ವೇಳೆ ರಿಪ್ಲೇನಲ್ಲಿ ಕ್ಯಾಚ್ ಪಡೆಯುವ ಮುನ್ನವೇ ಚೆಂಡು ನೆಲಕ್ಕೆ ಬಡಿದಿರುವುದು ಸ್ಪಷ್ಟವಾಗಿತ್ತು. ಪರಿಣಾಮ ತಮ್ಮ ತೀರ್ಪನ್ನು ಬದಲಿಸಿದ ಅಂಪೈರ್ ಟಾಮ್ ಕರ್ರನ್‍ರನ್ನು ನಾಟೌಟ್ ಎಂದು ತಿಳಿಸಿ ಬ್ಯಾಟಿಂಗ್ ಮುಂದುವರಿಸಲು ಸೂಚಿಸಿದ್ದರು.

ನಿಯಮಗಳ ಅನ್ವಯ ಆನ್‌ಫೀಲ್ಡ್ ಅಂಪೈರ್ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಮುನ್ನವೇ ಸಂದೇಹವಿದ್ದರೇ 3ನೇ ಅಂಪೈರ್ ನೆರವು ಪಡೆಯಬೇಕು. ತೀರ್ಪು ನೀಡಿದ ಬಳಿಕ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂಬುದು ಚೆನ್ನೈ ಆಟಗಾರರ ವಾದವಾಗಿತ್ತು. ಇದರಿಂದಾಗಿ ಎಂಎಸ್ ಧೋನಿ ಅಂಪೈರ್ ನಿರ್ಧಾರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಅಂಪೈರ್ ಜೊತೆ ಧೋನಿ ಕೆಲ ಸಮಯದ ವಾದವನ್ನು ನಡೆಸಿದ್ದರು.

ಅಂಪೈರ್ ತೀರ್ಮಾನದ ಕುರಿತು ಧೋನಿ ಪತ್ನಿ ಸಾಕ್ಷಿ ಕೂಡ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. "ನೀವು ತಂತ್ರಜ್ಞಾನ ಬಳಸುತ್ತಿದ್ದರೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿ. ಔಟ್ ಎಂದ್ರೇ ಔಟ್ ಅಷ್ಟೇ, ಅದು ಕ್ಯಾಚ್ ಆದ್ರೂ ಎಲ್‍ಬಿಡಬ್ಲ್ಯೂ ಆದ್ರೂ ಎಂದು ಹೇಳಿದ್ದರು. ಆದರೆ ಕೆಲ ಸಮಯದ ಬಳಿಕ ಈ ಟ್ವೀಟ್‍ನ್ನು ಸಾಕ್ಷಿ ಡಿಲೀಟ್ ಮಾಡಿದ್ದಾರೆ.

Edited By : Vijay Kumar
PublicNext

PublicNext

23/09/2020 05:28 pm

Cinque Terre

39.6 K

Cinque Terre

4

ಸಂಬಂಧಿತ ಸುದ್ದಿ