ದುಬೈ : ಐಪಿಎಲ್-13ರನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ಸಿಎಸ್ ಕೆ Vs ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿವೆ.
ಟೂರ್ನಿ ಆರಂಭಗೊಂಡ ವಾರದ ಒಳಗಾಗಿ 3ನೇ ಹೋರಾಟಕ್ಕೆ ಸಜ್ಜಾಗಿರುವ ಹಿರಿಯ ಆಟಗಾರರ ಸಿಎಸ್ ಕೆ ತಂಡ ಗೆಲುವಿನ ಹಾದಿಗೆ ಮರಳುವ ಭರವಸೆಯಲ್ಲಿದೆ.
ಆರಂಭದಲ್ಲಿ ಆಟದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ದಾಖಲಿಸಿ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಿಎಸ್ಕೆ ಶರಣಾಗಿತ್ತು.
ಮತ್ತೊಂದೆಡೆ ಬಹುತೇಕ ಯುವ ಆಟಗಾರರಿಂದ ತುಂಬಿರುವ ಡೆಲ್ಲಿ ಲೀಗ್ ಆರಂಭದಲ್ಲೇ ಗಾಯದ ಸಮಸ್ಯೆ ಎದುರಿಸಿದ್ದು, ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೊಂಚ ಅಂತರದಲ್ಲಿ ಸೋಲು ತಪ್ಪಿಸಿಕೊಂಡಿರುವ ಡೆಲ್ಲಿ ಇಂದು ಮತ್ತೊಂದು ಜಯದ ವಿಶ್ವಾಸದಲ್ಲಿದೆ.
PublicNext
25/09/2020 07:35 am