ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಮಣ್ಯ ದೇವಸ್ಥಾನದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 4ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯಾಯ ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ ಅದ್ಧೂರಿಯಾಗಿ ಹತ್ತು ದಿನಗಳ ಕಾಲ ಶರನ್ನವರಾತ್ರಿ ಮಹೋತ್ಸವ ಆಚರಿಸಿಕೊಂಡಿ ಬರಲಾಗುತ್ತಿದೆ. ಈ ಬಾರಿಯೂ ಅದ್ಧೂರಿಯಾಗಿ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಈ ಬಾರಿ ಶ್ರೀ ವರಾಹಿ ದೇವಿಯನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಬೆಳಿಗ್ಗೆ 9:30ಕ್ಕೆ ಗಣಪತಿ ಪೂಜೆ, ಮಹಾ ಸಂಕಲ್ಪದೊಂದಿಗೆ ಚಂಡಿಕಾ ಯಾಗ ನಡೆಯುತ್ತದೆ. ಮಧ್ಯಾಹ್ನ 12:30ಕ್ಕೆ ಮಹಾಪೂರ್ಣಾಹುತಿ ಇದ್ದು, ನಂತರ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ಎಂದರು.
ಪ್ರತಿದಿನ ಸಂಜೆ 5 ಗಂಟೆಯಿಂದ ನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ಹಾಗೂ 6:30ರಿಂದ ನಗರದ ಹಾಗೂ ಜಿಲ್ಲೆಯ ವಿವಿಧ ಪ್ರಖ್ಯಾತ ಕಲಾವಿದರಿಂದ ಭರತನಾಟ್ಯ, ಯಕ್ಷಗಾನ, ಸಂಗೀತ, ದೇವಿಕೃತಿಗಳ ಗಾಯನ ಇರುತ್ತದೆ. ಸೆ. 26ರ ಸಂಜೆ 6.30ಕ್ಕೆ ಶ್ರೀ ಶಾರದಾ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಜಿ. ಆರುಣ್ ಕುಮಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಧಾರ್ಮಿಕ ಚಿಂತಕರಾದ ಶ್ವಾಣಿ ಉಪಾಧ್ಯ ಉಪಸ್ಥಿತಿ ಇರಲಿದೆ ಎಂದರು.
PublicNext
25/09/2022 07:30 pm