ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ನೀರ್ ಕೊಡು ಬಡಾವಣೆಯಲ್ಲಿ ಹಸುವೊಂದು ಬಾವಿಗೆ ಬಿದ್ದು 24 ಗಂಟೆ ಕಳೆದರು ಪವಾಡ ಸದೃಶ್ಯ ಬದುಕುಳಿದಿದೆ.
ಹೌದು ಮಂಗಳವಾರದಿಂದ ಕಾಣೆಯಾಗಿದ್ದ ಜೋಸೆಫ್ ಎಂಬುವವರಿಗೆ ಸೇರಿದ ಹಸು ಎಷ್ಟು ಹುಡುಕಿದರು ಸಿಕ್ಕಿರಲಿಲ್ಲ. ಬುಧವಾರ ಮಧ್ಯಾಹ್ನದ ಬಳಿಕ ನೀರು ಕೊಡು ಪ್ರದೇಶದ ಮೈದಾನದಲ್ಲಿರುವ ಪಾಳು ಬಾವಿಯಲ್ಲಿ ರಾಸು ಪತ್ತೆಯಾಗಿದೆ.
ಇನ್ನು ಬಾವಿಯೊಳಗೆ ಬಿದ್ದ ಗಬ್ಬದ ಹಸು 24 ಗಂಟೆಗಳ ಕಾಲ ಜೀವ ಉಳಿಸಿಕೊಳ್ಳಲು ಪರದಾಡಿದ್ದು ಮಾತ್ರ ಆಶ್ಚರ್ಯಕರವಾಗಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯರು ಹಸುವನ್ನು ರಕ್ಷಿಸಿದ್ದಾರೆ.
PublicNext
15/09/2022 12:26 pm