ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಅಸಮರ್ಥ ಹೇಳಿಕೆಯಿಂದ ಕ್ಷೇತ್ರದ ಜನರಿಗೆ ಅವಮಾನ: ಶಾಸಕ ಅಶೋಕ್ ನಾಯ್ಕ್ ವಿರುದ್ಧ ಬಿಎಸ್ಪಿ ಗರಂ

ಶಿವಮೊಗ್ಗ : ಗ್ರಾಮಾಂತರ ಶಾಸಕ ಅಶೋಕ್ ನಾಯ್ಕರವರು ಅಸಮರ್ಥ ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎ.ಡಿ. ಶಿವಪ್ಪ ಆರೋಪಿಸಿದ್ದಾರೆ.

ಇಂದು ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಅಶೋಕ ನಾಯ್ಕ ಅವರು ಕಂದಾಯ ಇಲಾಖೆಯ ಅಧಿಕಾರಿಗಳು ನನ್ನ ಮಾತನ್ನು ಕೇಳುತ್ತಿಲ್ಲ. ಹಾಗಾಗಿ ದಾಖಲೆರಹಿತ ಗ್ರಾಮಗಳನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಸಾಧ್ಯವಾಗಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋರಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಇವರದ್ದೇ ಸರ್ಕಾರವಿದೆ. ಆದರೂ ಕ್ಷೇತ್ರದ ಜನರಿಗೆ ಸಹಾಯ ಮಾಡಲು ಆಗಿಲ್ಲ ಎಂದು ದೂರಿದ್ದಾರೆ. ಶಾಸಕರು ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮಾಂತರ ಕ್ಷೇತ್ರದಲ್ಲಿ ಕೇವಲ 74 ದಾಖಲೆ ರಹಿತ ಗ್ರಾಮಗಳಿಲ್ಲ. ಸಾವಿರಾರು ಗ್ರಾಮಗಳಿಗೆ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಲು ಇದುವರೆಗೂ ಆಗಿಲ್ಲ. ಬಡವರಿಗೆ ವಾಸದಮನೆ ಸಿಕ್ಕಿಲ್ಲ. ಕನಿಷ್ಟ ಸೌಲಭ್ಯಗಳೂ ಇಲ್ಲ. ನೂರಾರು ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ. ರಸ್ತೆಗಳಿಲ್ಲ, ಬಸ್ ವ್ಯವಸ್ಥೆಯಿಲ್ಲ. ಆಸ್ಪತ್ರೆಗಳಿಲ್ಲ ಎಂದು ದೂರಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಯಾವ ಸರ್ಕಾರಗಳೂ ಬಡವರ ಕಲ್ಯಾಣ ಮಾಡಿಲ್ಲ. ಸಂವಿಧಾನದ ಪ್ರಕಾರ ನಡೆದುಕೊಂಡಿದ್ದರೆ 20 ವರ್ಷಗಳಲ್ಲಿ ಬಡತನವೇ ಇರುತ್ತಿರಲಿಲ್ಲ. ಈಗ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ. ಗ್ರಾಮಾಂತರ ಶಾಸಕರು ವಿಧಾನಸಭೆಯಲ್ಲಿ ಕಂದಾಯ ಗ್ರಾಮಗಳ ಬಗ್ಗೆ ಮಾತನಾಡಿಯೇ ಇಲ್ಲ. ಹೀಗೆ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲೂ ವಿಫಲವಾಗಿರುವ ಅಶೋಕ ನಾಯ್ಕರವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಜಪ್ಪ, ಲಕ್ಷ್ಮೀಪತಿ, ವೆಂಕಟೇಶ್, ತಮ್ಮಡಿಹಳ್ಳಿ ಲೋಕೇಶ್ ಇದ್ದರು.

Edited By : Nagesh Gaonkar
PublicNext

PublicNext

11/10/2022 07:41 pm

Cinque Terre

25.4 K

Cinque Terre

0

ಸಂಬಂಧಿತ ಸುದ್ದಿ