ಶಿವಮೊಗ್ಗ : ಉತ್ತರ ಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನಕ್ಕೆ ಶಾಸಕ ಕೆ.ಎಸ್. ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಲಾಯಂ ಸಿಂಗ್ ಯಾದವ್ ಅವರು ಯುಪಿ ಸಿಎಂ ಆಗಿದ್ದ ಸಂದರ್ಭ ಸಾಕಷ್ಟು ಉತ್ತಮ ಕಾರ್ಯ ಮಾಡಿದ್ರು. ರಾಷ್ಟ್ರನಾಯಕನನ್ನು ಕಳೆದುಕೊಂಡಿದ್ದೇವೆ. ಅವರು ಸಿಎಂ ಆಗಿದ್ದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಅವರ ಭೇಟಿಗೆ ಹೋಗಿದ್ವಿ. ಆಗ ಅಯೋಧ್ಯೆಯೊಳಗೆ ಒಂದು ಸೊಳ್ಳೆಯೂ ಒಳಗೆ ಹೋಗಲು ಬಿಡುವುದಿಲ್ಲ ಅಂತ ಹೇಳಿದ್ರು ಎಂದರು.
ಇನ್ನು ಮುಲಾಯಂ ಸಿಂಗ್ ಯಾದವ್ ಪಕ್ಷ ಕಟ್ಟಲು ಹೋರಾಟ ಮಾಡಿದ್ರು. ಆದರೆ ಅವರ ಮಗ ಅಖಿಲೇಶ್ ವಿಫಲರಾಗಿದ್ದಾರೆ. ವ್ಯಕ್ತಿಯ ಮೇಲೆ ಪಕ್ಷ ನಿಲ್ಲೋದು ಕಷ್ಟ. ರಾಮ ಲೋಹಿಯಾ ನಿಧನದ ನಂತರ ಅವರ ಪಕ್ಷವೂ ಹೋಯ್ತು. ದೇಶ, ಸಂಸ್ಕೃತಿಯ ರಕ್ಷಣೆ ಉದ್ದೇಶದಲ್ಲಿ ಪಕ್ಷ ಕಟ್ಟಿದರೆ ಆ ಪಕ್ಷ ಉಳಿಯುತ್ತೆ ಎಂದು ಈಶ್ವರಪ್ಪ ಹೇಳಿದ್ದಾರೆ.
PublicNext
10/10/2022 02:43 pm