ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ತಾಳಿ ಕಟ್ಟೋಕೆ ಹೊರಟಿದ್ದಾರೆ. ಆದರೆ ಅವರಿಗೆ ಯಾರೂ ಹೆಣ್ಣು ಕೊಡ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಈಶ್ವರಪ್ಪ ಅವರು ಮತ್ತೆ ಸಚಿವರಾಗಬೇಕೆಂದು ಹೇಳಿಕೊಂಡಿದ್ದಾರೆ. ಅವರಿಗೆ ಸಚಿವ ಸ್ಥಾನ ಮತ್ತೆ ಸಿಗುತ್ತಿಲ್ಲ. ಬಿಜೆಪಿಯ ಹಿರಿಯ ಮುಖಂಡರಿಗೆ ಈ ರೀತಿ ಆದ್ರೆ ಹೇಗೆ ಎಂದು ಬೇಳೂರು ಕಿಚಾಯಿಸಿದ್ದಾರೆ.
ಬಿಜೆಪಿಯ ಪರಿಸ್ಥಿತಿ ಏನಾಗಿದೆ ಎಂಬುದು ಇದರಿಂದ ತಿಳಿಯುತ್ತಿದೆ. ವಯಸ್ಸಾದವರಿಗೆ ಮದ್ವೆ ಮಾಡ್ಕೋ ಎಂದರೆ, ನನಗೆ ಯಾರು ಹೆಣ್ಣು ಕೊಡ್ತಾರೆ ಅಂತ ಹೇಳ್ತಾರೆ. ಈಶ್ವರಪ್ಪ ಕ್ಲೀನ್ ಚಿಟ್ ತೆಗೆದುಕೊಂಡು ರೆಡಿಯಾಗಿ ಕೂತಿದ್ದಾರೆ. ಆದರೆ ಪಾಪಾ ಅವರಿಗೆ ಯಾರೂ ಹೆಣ್ಣು ಕೊಡ್ತಿಲ್ಲ. ನಮ್ಮ ಪಕ್ಷದ ಬಗ್ಗೆ ಈಶ್ವರಪ್ಪ ಕೆಟ್ಟದಾಗಿ ಮಾತನಾಡ್ತಾರೆ. ಆದರೆ ಅವರ ಪಕ್ಷದಲ್ಲೇ ಹುಳ ಬಿದ್ದಿದೆ ಎಂದು ಬೇಳೂರು ಗೋಪಾಲಕೃಷ್ಣ ಬಿಜೆಪಿಯನ್ನು ಟೀಕಿಸಿದ್ದಾರೆ.
PublicNext
09/10/2022 09:17 pm