ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಪಿಎಫ್ಐ ಸದಸ್ಯರಿಗೆ ಅವರ ಹಿರಿಯರು ಬುದ್ಧಿ ಹೇಳಬೇಕು; ಮಾಜಿ ಸಚಿವ ಈಶ್ವರಪ್ಪ

ಶಿವಮೊಗ್ಗ : ಪಿಎಫ್ ಐ ಜೊತೆ ಸೇರಿಕೊಂಡು, ರಾಷ್ಟ್ರದ್ರೋಹಿ ಚಟುವಟಿಕೆ ನಡೆಸಿ ಅರೆಸ್ಟ್ ಆಗಿ ಜೈಲಿಗೆ ಹೋಗಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಾರೆ. ದಾರಿ ತಪ್ಪಿರುವ ಮುಸ್ಲಿಂ ಗೂಂಡಾಗಳು ಮತ್ತೆ ರಾಷ್ಟ್ರೀಯ ವಾಹಿನಿ ಕಡೆ ಬರಬೇಕೆಂದು ಮುಸ್ಲಿ ಹಿರಿಯರು ಬುದ್ಧಿ ಹೇಳಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಂತಹ ಚಟುವಟಿಕೆಗಳು ದೇಶ ಭಕ್ತ ಮುಸ್ಲಿಮರಿಗೆ ಬೇಸರ ತಂದಿದೆ. ಪಿಎಫ್ಐ ಬ್ಯಾನ್ ಆದ ಮೇಲೆ ರಸ್ತೆ ಮೇಲೆ ಬರೆದಿದ್ದಾರೆ. ಅವರು ನಾವು ಮತ್ತೆ ಬರುತ್ತೇವೆ, ಚಡ್ಡಿಗಳಿಗೆ ಉತ್ತರ ಕೊಡ್ತೇವೆ ಅಂತ ಬರೆದಿದ್ದಾರೆ. ಯಾವ ಆರ್ ಎಸ್ ಎಸ್ ನವರು ಇವರ ಗೂಂಡಾ ಬರಹಕ್ಕೆ ಹೆದರಲ್ಲ. ರಾತ್ರಿ ವೇಳೆ ಹೇಡಿಗಳ ತರಹ ಬರೆದಿದ್ದಾರೆ. ಇದನ್ಬು ಒಬ್ಬನೇ ಒಬ್ಬ ಕಾಂಗ್ರೆಸ್ ನವನೂ ಖಂಡಿಸಿಲ್ಲ.

ಪಿಎಫ್ಐ ನವರು ಕಾಂಗ್ರೆಸ್ ನವರ ಬೆಂಬಲದಿಂದ ರಾಷ್ಟ್ರದ್ರೋಹಿ ಚಟುವಟಿಕೆ ನಡೆಸಿದ್ದರು. ಪಿಎಫ್ ಐ ಬೇರೆ ಯಾವುದೇ ಹೆಸರಿನಲ್ಲಿ ಬಂದ್ರೆ ಅವರ ಸೊಂಟ ಮುರಿಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಮಾಡಲಿದ್ದಾರೆ ಎಂದರು.

ಪರೇಸ್ ಮೇಸ್ತಾ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಸಿಎಂ ಬೊಮ್ಮಯಿ ಹಾಗೂ ಕೇಂದ್ರದ ನಾಯಕರಿಗೆ ಮನವಿ ಮಾಡುತ್ತೇವೆ. ಪರೇಸ್ ಮೇಸ್ತಾ ಕೊಲೆ ನಡೆಸಲಾಗಿದೆ ಎಂದು ಅವರ ಕುಟುಂಬ ಹೇಳುತ್ತಿರುವುದು ಸರಿಯಾಗಿದೆ. ಇದರಿಂದ ಮರು ತನಿಖೆಗೆ ಮನವಿ ಮಾಡುತ್ತೇವೆ ಎಂದರು.

ಅ.30 ರಂದು ಬಿಜೆಪಿಯಿಂದ ಒಬಿಸಿ ಬೃಹತ್ ಸಮಾವೇಶ ನಡೆಸಲಾಗುತ್ತದೆ. ಸುಮಾರು 5 ಲಕ್ಷ ಜನ ಸೇರಲಿದ್ದಾರೆ. ಇದಕ್ಕಾಗಿ ಐದು ತಂಡಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಖಂಡಿತ ಈ ಸಮಾವೇಶ ಯಶಸ್ವಿಯಾಗುತ್ತದೆ ಎಂದರು.

Edited By : Nagesh Gaonkar
PublicNext

PublicNext

04/10/2022 04:50 pm

Cinque Terre

23.12 K

Cinque Terre

1

ಸಂಬಂಧಿತ ಸುದ್ದಿ