ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಪಿಎಫ್‌ ಐ ನಿಷೇಧಿಸಲು ಕೇಂದ್ರ ಸಿದ್ಧತೆ, ಸಮಗ್ರ ತನಿಖೆ; ಬಿಎಸ್ ವೈ

ಶಿವಮೊಗ್ಗ: ಪಿಎಫ್ಐ ಸಂಘಟನೆ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 40ಕ್ಕೂ ಹೆಚ್ಚು ಕಡೆ ಪೊಲೀಸರ ದಾಳಿ ನಡೆಸಲಾಗಿದೆ. ಅನೇಕ ಪಿಎಫ್ಐ ಕಾರ್ಯಕರ್ತರು, ಮುಖಂಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪಿಎಫ್ಐ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪಿಎಫ್ಐ ವಿರುದ್ಧ ಸಮಗ್ರ ತನಿಖೆ ಮಾಡಿದ ನಂತರ ಅವರ ದೇಶದ್ರೋಹಿ ಚಟುವಟಿಕೆಗಳು ಮತ್ತು ಕೇಂದ್ರ ಸರ್ಕಾರ ಉರುಳಿಸಲು ಮಾಡಿರುವ ಷಡ್ಯಂತ್ರ ಬಯಲಾಗಲಿದೆ ಎಂದರು.

ಕಾಂಗ್ರೆಸ್ ಹಗಲು ದರೋಡೆ ಮಾಡಿದೆ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅಲ್ಲಗಳೆದಿಲ್ಲ. ಕಾಂಗ್ರೆಸ್ಸಿಗರು ಅಧಿಕಾರದ ಅವಧಿಯಲ್ಲಿ ಹಗಲು ದರೋಡೆ ಮಾಡಿದ್ದಾರೆ. ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಶಿಕ್ಷಕರ ನೇಮಕಾತಿ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ನಾಡಿನ ಜನತೆಗೆ ಉತ್ತರ ಕೊಡಬೇಕು. ತನಿಖೆ ನಡೆದರೆ ಎಲ್ಲಾ ಹೊರಗೆ ಬರುತ್ತದೆ. ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಹಗರಣ ನಡೆದಿದೆ. ಹೀಗಾಗಿಯೇ ರಾಜ್ಯದ ಜನರು ಅವರನ್ನು ಅಧಿಕಾರದಿಂದ ದೂರ ಇಟ್ಟರು ಎಂದರು.

ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನವಾಗಿದ್ದು, ಈ ಹಿಂದೆ ಶಿಕಾರಿಪುರದಲ್ಲೂ ಓರ್ವನ ಬಂಧನವಾಗಿತ್ತು. ಇವರ ಚಟುವಟಿಕೆಗಳನ್ನು ಗಮನಿಸಿಯೇ ಇವರ ಮೇಲೆ ನಿಗಾ ಇಟ್ಟು ಪೊಲೀಸರು ಬಂಧಿಸಿದ್ದಾರೆ. ತಪ್ಪು ಮಾಡಿದವರನ್ನು ಕಾನೂನು ಸುಮ್ಮನೇ ಬಿಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.

Edited By : Manjunath H D
PublicNext

PublicNext

27/09/2022 08:12 pm

Cinque Terre

23.85 K

Cinque Terre

2

ಸಂಬಂಧಿತ ಸುದ್ದಿ