ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಒಂದೇ ಲಂಚ ಬಿಡಿ ಇಲ್ಲವೇ ಊರು ಬಿಡಿ... ಲಂಚಕೋರ ಅಧಿಕಾರಿಗಳಿಗೆ ಸಂಸದ ರಾಘವೇಂದ್ರ ಖಡಕ್ ವಾರ್ನಿಂಗ್..!

ಶಿವಮೊಗ್ಗ: ‘ಕೈ ಚಾಚುವವರು (ಲಂಚಕ್ಕೆ) ಊರು ಖಾಲಿ ಮಾಡಿ. ನಮಗೆ ಅಸಹ್ಯ ಉಂಟು ಮಾಡಬೇಡಿ. ಲಂಚಕ್ಕೆ ಕೈಯೊಡ್ಡುವವರ ಮಾಹಿತಿಯನ್ನು ಪಟ್ಟಿ ಸಮೇತ ಬೇಕಿದ್ದರೆ ಕೊಡುತ್ತೆನೆ!’ ಎಂದು ಗುಡುಗಿದವರು ಶಿವಮೊಗ್ಗಾ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ..

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜನರ ಕೆಲಸ ಮಾಡಿಕೊಡಲು ಲಂಚಕ್ಕೆ ಡಿಮ್ಯಾಂಡ್ ಮಾಡುವ ಅಧಿಕಾರಿ-ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ವಾಗ್ದಾಳಿ ನಡೆಸಿದರು..

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಪ್ರವೀಣ್ ರಾವ್

Edited By : Somashekar
Kshetra Samachara

Kshetra Samachara

14/09/2022 02:33 pm

Cinque Terre

2.16 K

Cinque Terre

0

ಸಂಬಂಧಿತ ಸುದ್ದಿ