ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಡುಕೋಣ ತಿವಿತಕ್ಕೆ ಗಾಯಗೊಂಡ ಮಹಿಳೆ

ಶಿವಮೊಗ್ಗ : ಕೆಲಸಕ್ಕೆ ಹೋಗುತ್ತಿದ್ದ ವೇಳೆ ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ನಡೆದಿದೆ. ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮಾಕೋಡು ನಿವಾಸಿ ಜಯಮ್ಮ (45) ಕಾಡುಕೋಣ ದಾಳಿಗೆ ತುತ್ತಾದ ಮಹಿಳೆ. ಬೆಳಿಗ್ಗೆ ಎದ್ದು ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ.

ಮಹಿಳೆಯನ್ನು ಕೋಡಿನಿಂದ ತಿವಿದು ನಂತರ ಎತ್ತಿ ಬಿಸಾಡಿದ ಪರಿಣಾಮ ಮಹಿಳೆಯ ಕೈ ಮುರಿದಿದೆ ಮಾತ್ರವಲ್ಲದೆ ದೇಹದ ವಿವಿಧ ಭಾಗಳಿಗೂ ಗಾಯಗಳಾಗಿವೆ.ಇನ್ನು ಮಹಿಳೆಯ ಚೀರಾಟ ಕೇಳಿ ತುಸುದೂರದಲ್ಲಿದ್ದ ಪತಿ ನರಸಿಂಹ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಾಡುಕೋಣ ಅಲ್ಲಿಂದ ಮರೆಯಾಗಿದೆ. ಕೂಡಲೇ ತೀವ್ರ ಗಾಯಗೊಂಡಿದ್ದ ಜಯಮ್ಮರನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಯಿತು. ಸದ್ಯ ಮಂಗಳೂರು ಸುರತ್ಕಲ್ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಡುಕೋಣ ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆ ನಗರ ವಲಯ ಅರಣ್ಯಾಧಿಕಾರಿ ಸಂಜಯ್ ಭೇಟಿ ನೀಡಿ ಪರಿಶೀಲಿಸಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

05/10/2022 09:32 am

Cinque Terre

3.8 K

Cinque Terre

0