ಶಿವಮೊಗ್ಗ: ಮಧುಮೇಹ ಅರಿವು ಕುರಿತು ಜಾಥಾಕ್ಕೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಚಾಲನೆ ನೀಡಿದರು. ಇಂದು ಮೆಟ್ರೋ-ವಿನ್ ಲೈಫ್ ಸಂಸ್ಥೆ, ಟಿಎಂಎಇ ಸೊಸೈಟಿ, ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸಿಮ್ಸ್ ಆವರಣದಿಂದ ಮಧುಮೇಹ ಅರಿವು ಜಾಥಾ ಆರಂಭವಾಗಿ ಗೋಪಿ ವೃತ್ತದವರೆಗೆ ಸಾಗಿತು.
ಜಾಥಾದಲ್ಲಿ ಮಧುಮೇಹದ ಅರಿವು ಮೂಡಿಸುವ ಫಲಕಗಳನ್ನು ಪ್ರದರ್ಶಿಸಲಾಯಿತು. ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಸೆಲ್ವಮಣಿ ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಧುಮೇಹಿಗಳಿದ್ದಾರೆ. ಕಾರಣ ನಮ್ಮ ಜೀವನಕ್ರಮ ಮತ್ತುಆಹಾರ ಪದ್ಧತಿಯಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಕೌಟುಂಬಿಕ ವಾತಾವರಣ ಕಡಿಮೆಯಾಗುತ್ತಿದೆ. ಜಂಕ್ ಫುಡ್ ಸೇವನೆ ಹೆಚ್ಚಾಗಿದೆ. ನಿಯಮಿತ ವ್ಯಾಯಾಮ, ವಾಯುವಿಹಾರ, ಉತ್ತಮ ಆಹಾರ ಸೇವನೆಯಿಂದ ರಕ್ತದ ಒತ್ತಡ ಮತ್ತು ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದು. ಸಕ್ಕರೆ ಕಾಯಿಲೆ ಇದೆ ಎಂದಾಕ್ಷಣ ಅರ್ಧದಷ್ಟು ಜನ ಆತಂಕಕ್ಕೊಳಗಾಗುತ್ತಾರೆ. ಸಕ್ಕರೆ ಕಾಯಿಲೆ ಇದ್ದರೂ ಸಹ ಬದುಕನ್ನು ಗೆಲ್ಲುವ ಸುಲಭ ವಿಧಾನಗಳ ಕುರಿತು ಅರಿವು ಮೂಡಿಸುವುದೇ ಈ ಜಾಥಾದ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಡಾ. ಪೃಥ್ವಿ, ಡಾ. ಪುಷ್ಪಾ, ಡಾ. ಲಕ್ಷ್ಮಿನಾರಾಯಣ್, ಡಾ. ತೇಜಸ್ವಿ, ವಿವಿಧ ಆಸ್ಪತ್ರೆಗಳ ಸಿಬ್ಬಂದಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
PublicNext
13/10/2022 06:29 pm