ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚಾಲನೆ; ಆರೋಗ್ಯ ಕಾರ್ಡ್ ವಿತರಣೆ

ಶಿವಮೊಗ್ಗ: ‌ ಹೆದರಿಕೆಯಿಂದ ಧರ್ಮ ಸ್ವೀಕರಿಸದೆ, ಧೈರ್ಯದಿಂದ ಧರ್ಮ ಸ್ವೀಕರಿಸಬೇಕು. ಇಲ್ಲವಾದಲ್ಲಿ ಮಾಡುವ ಸಣ್ಣ ತಪ್ಪಿನಿಂದ ಮನುಕುಲವೇ ನಾಶವಾಗಬಹುದಾದ ಸಾಧ್ಯತೆ ಇದೆ ಎಂದು ರಂಗಕರ್ಮಿ ಚರಕ ಪ್ರಸನ್ನ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಇಂದು ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ, ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರಿಶ್ಚಿಯನ್, ಬೌದ್ಧ, ಹಿಂದು, ಮುಸ್ಲಿಂ ಹೀಗೆ ಯಾವುದೇ ದೇಶವಿರಲಿ, ಧರ್ಮವನ್ನು ಕೇವಲ ಕಚ್ಚಾಡುವುದಕ್ಕೆ ಸೀಮಿತ ಮಾಡಿಕೊಳ್ಳಲಾಗುತ್ತಿದೆ. ನಾವೆಲ್ಲರೂ ಭಾರತೀಯರಾಗಿ ಒಂದಾಗಿರಬೇಕು. ರಾಜಕೀಯವಾಗಿ ವಿಮರ್ಶೆ ಮಾಡಿ ನೋಡದೆ ಇದ್ದಲ್ಲಿ ಭಾರತೀಯತೆ ಸುಳ್ಳು, ಭಾರತಾಂಬೆ ಸುಳ್ಳು, ದೇಶ ಕಟ್ಟುತ್ತೇವೆ ಎಂಬುದು ಸುಳ್ಳಾಗುತ್ತದೆ. ಧರ್ಮವೇ ಜಗಳಕ್ಕೆ ಪೂರಕವಾಗುತ್ತದೆ.

ಪತ್ರಕರ್ತರಾದವರು ಹೆದರಿಕೆಯನ್ನು ಬದಿಗಿಟ್ಟು ಧೈರ್ಯದಿಂದ ವಸ್ತುಸ್ಥಿತಿ ತಿಳಿಸುವ ಕಾರ್ಯ ಮಾಡಬೇಕಿದೆ. ವರದಿಗಾರರು ಸತ್ಯವನ್ನು ನೋಡಬೇಕು. ಸಾಮಾಜಿಕ ಬದ್ಧತೆ, ವಾಸ್ತವತೆ ಗ್ರಹಿಸಿದಾಗ ಉತ್ತಮ ವರದಿ ಮೂಡಿಬರಲು ಸಾಧ್ಯ ಎಂದರು. ಈ ಸಂದರ್ಭ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಿಸಲಾಯಿತು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಸರ್ಜಿ ಸಮೂಹ ಸಂಸ್ಥೆ ಚೇರ್ಮನ್ ಧನಂಜಯ ಸರ್ಜಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ಉಪಸ್ಥಿತರಿದ್ದರು.

Edited By :
PublicNext

PublicNext

16/09/2022 10:38 pm

Cinque Terre

33.9 K

Cinque Terre

1

ಸಂಬಂಧಿತ ಸುದ್ದಿ