ಶಿವಮೊಗ್ಗ: ದೇಶದ ಬೆನ್ನೆಲುಬು ರೈತ, ರೈತರ ಜೀವನ ವಿಶಿಷ್ಟ ಇಂತಹ ರೈತರ ಜೀವನ ತೋರಿಸುವ ಕಾರ್ಯ ಶಿವಮೊಗ್ಗ ದಸರಾದಲ್ಲಿ ನಡೆದಿದೆ. ಶಿವಮೊಗ್ಗ ದಸರಾ ಮಹೋತ್ಸವ ಅಂಗವಾಗಿ ಇಂದು ನಗರದಲ್ಲಿ ಸಡಗರ, ಸಂಭ್ರಮದಿಂದ ರೈತ ದಸರಾ ನಡೆಸಲಾಯಿತು.
ಅಲಂಕೃತ ಎತ್ತಿನ ಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ನಗರದ ಸೈನ್ಸ್ ಫಿಲ್ಡ್ ನಿಂದ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಎಲ್ಲೆಡೆ ಹಸಿರು ಮೇಳೆಸಿತ್ತು. ಸುತ್ತಮುತ್ತಲಿನ ನೂರಾರು ರೈತರು, ರೈತ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿವ ಶರಣ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ರೈತ ದಸರಾ ಜಾಥಾ ಉದ್ಘಾಟಿಸಿದರು.
ಪ್ರಗತಿ ಪರ ರೈತ ಮಹಿಳೆ ಕವಿತಾ ಮಿಶ್ರಾ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರು ಭಾಗಿಯಾಗಿ, ಎತ್ತಿನ ಗಾಡಿಯಲ್ಲಿ ಆಗಮಿಸಿದ್ದು, ವಿಶೇಷವಾಗಿತ್ತು. ಮೆರವಣಿಗೆ ಕುವೆಂಪು ರಂಗಮಂದಿರ ತಲುಪಿದ ನಂತರ ವೇದಿಕೆ ಕಾರ್ಯಕ್ರಮ ನಡೆಸಲಾಯಿತು. ರೈತರಿಗಾಗಿ ನಡೆದ ಈ ರೈತ ದಸರಾದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪಾಲಿಕೆ ಆಯೋಜನೆ ಮಾಡಲಾಗಿತ್ತು. ರಾಜ್ಯದಲ್ಲಿ ಮೈಸೂರು ಹೊರತುಪಡಿಸಿದರೆ, ಶಿವಮೊಗ್ಗದಲ್ಲೇ, ಎರಡನೇ ಅತಿ ದೊಡ್ಡ ದಸರಾ ಮಹೋತ್ಸವನ್ನು ಆಚರಿಸುವುದು ವಿಶೇಷ.
PublicNext
29/09/2022 07:44 pm