ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: 65 ವರ್ಷದ ಮಹಿಳೆ ಹೊಟ್ಟೆಯಿಂದ 4 ಕೆ.ಜಿ. ತೂಕದ ಗೆಡ್ಡೆ ಹೊರ ತೆಗೆದ ತೀರ್ಥಹಳ್ಳಿ ವೈದ್ಯರು

ಶಿವಮೊಗ್ಗ: 65 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆಜಿಯಷ್ಟು ದೊಡ್ಡ ಗೆಡ್ಡೆಯೊಂದನ್ನು ಹೊರ ತೆಗೆಯಲಾಗಿದೆ. ಹೊಟ್ಟೆಯಲ್ಲಿದ್ದ ನಾಲ್ಕು ಕೆಜಿ ತೂಕದ ಗೆಡ್ಡೆ ತೆಗೆದ ತೀರ್ಥಹಳ್ಳಿ ವೈದ್ಯರು ಹೊರತೆಗೆದಿದ್ದು, ಭದ್ರಾವತಿ ಸಮೀಪದ ಅಂತರಗಂಗೆ ನಿವಾಸಿಯಾಗಿರುವ 65 ವರ್ಷದ ಶಾರದಮ್ಮ ಎಂಬುವರು ಕಳೆದ ಕೆಲ ದಿನಗಳ ಹಿಂದೆ, ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ದಾಖಲಾಗಿದ್ದರು.

ಇಲ್ಲಿಯವರೆಗೆ ಯಾವುದೇ ತೊಂದರೆ ಇರಲಿಲ್ಲ ಎಂದ ಶಾರದಮ್ಮ ಅವರಿಗೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ, ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಬಳಿಕ ಹೊಟ್ಟೆಯಲ್ಲಿ ಗೆಡ್ಡೆ ಇರುವ ಬಗ್ಗೆ ವೈದ್ಯರು ಖಚಿತ ಪಡಿಸಿದ್ದರು. ವಯಸ್ಸಾದ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗಳಲ್ಲಿ ಕೆಲವು ವೈದ್ಯರು ಗೆಡ್ಡೆ ತೆಗೆಯಲು ಒಪ್ಪಿರಲಿಲ್ಲ. ಬಳಿಕ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆ ವೈದ್ಯರು, ಬೃಹತ್ ಗೆಡ್ಡಯನ್ನು ಹೊರ ತೆಗೆದು ಸಾಧನೆ ತೋರಿದ್ದಾರೆ.

Edited By : Nagesh Gaonkar
PublicNext

PublicNext

17/09/2022 06:09 pm

Cinque Terre

17.33 K

Cinque Terre

0