ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗದಲ್ಲಿ ಕಳೆಕಟ್ಟಿದ ನಾಡಹಬ್ಬ-ಯೋಗ ದಸರಾದಲ್ಲಿ ನೂರಾರು ಯೋಗಪಟುಗಳು ಭಾಗಿ

ಶಿವಮೊಗ್ಗ: ನಾಡಹಬ್ಬ ದಸರಾ ನಾಡಿನೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅದರಲ್ಲೂ ಮೈಸೂರು ಹೊರತುಪಡಿಸಿದರೆ, ಶಿವಮೊಗ್ಗದಲ್ಲೇ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಅದರಂತೆ, ಶಿವಮೊಗ್ಗದಲ್ಲಿ ಯೋಗ ದಸರಾಗೂ ಒತ್ತು ನೀಡಲಾಗಿದ್ದು, ಶಿವಮೊಗ್ಗದ ಕುವೆಂಪು ರಂಗಮಂದಿರದ ಆವರಣದಲ್ಲಿ ಯೋಗಾಸನ ಮಾಡಲಾಯಿತು.

ಹಲವಾರು ಸಂಘ ಸಂಸ್ಥೆಗಳ ಯೋಗಪಟುಗಳು, ಆಸಕ್ತರು, ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿ, ಗಮನ ಸೆಳೆದರು. ನಗರದ ಹಲವಾರು ಯೋಗಪಟುಗಳು, ಚಿಣ್ಣರು ಸೇರಿದಂತೆ, ದೊಡ್ಡವರವರೆಗೂ ಈ ಯೋಗ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಸುಮಾರು ನೂರಾರು ಜನರು ಪಾಲ್ಗೊಂಡಿದ್ದು, ಆಕರ್ಷಕ ಭಂಗಿಗಳನ್ನು ಪ್ರದರ್ಶಿಸುವುದರ ಮೂಲಕ ನೆರೆದಿದ್ದವರ ಹುಬ್ಬೇರಿಸುವಂತೆ ಮಾಡಿದರು. ಅಲ್ಲದೇ, ಯೋಗ ಗುರುಗಳ ಮಾರ್ಗದರ್ಶನದಲ್ಲಿ, ವಿಶೇಷ ಭಂಗಿಗಳನ್ನು ಪ್ರದರ್ಶಿಸಿ, ಜನರು ಸೈ ಎನಿಸಿಕೊಂಡರು. ಇದಕ್ಕೂ ಮುನ್ನ ಯೋಗ ದಸರಾ ಕಾರ್ಯಕ್ರಮವನ್ನು ಎಂ.ಎಲ್.ಸಿ. ರುದ್ರೆಗೌಡರು ಸೇರಿದಂತೆ, ಹಿರಿಯ ಯೋಗ ಶಿಕ್ಷಕರು ಉದ್ಘಾಟಿಸಿದರು.

Edited By : Manjunath H D
PublicNext

PublicNext

02/10/2022 01:34 pm

Cinque Terre

24.95 K

Cinque Terre

0

ಸಂಬಂಧಿತ ಸುದ್ದಿ