ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಬಂದೂಕು, ರಿವಾಲ್ವರ್ ಗಳಿಗೆ ಆಯುಧಪೂಜೆ ನೆರವೇರಿಸಿದ ಪೊಲೀಸರು

ಶಿವಮೊಗ್ಗ : ಜಿಲ್ಲೆಯಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಯುಧ ಪೂಜೆ ಆಚರಿಸಲಾಗುತ್ತಿದೆ. ಎಲ್ಲೆಡೆ ಆಯುಧ ಪೂಜೆ ಜೋರಾಗಿದ್ದು, ಪೊಲೀಸರು, ನಗರದ ಡಿಎಆರ್ ಆರ್ಮ್ ಸ್ಟೋರ್ ರೂಂ ನಲ್ಲಿ ಆಯುಧಪೂಜೆಯನ್ನು ನರೆವೇರಿಸಿದರು. ಬಂದೂಕು, ರಿವಾಲ್ವರ್, ಆಯುಧಗಳಿಗೆ ಹಾಗೂ ಪೊಲೀಸ್ ವಾಹನಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ಸ್ಥಳದಲ್ಲಿ ನೆರೆದಿದ್ದವರಿಗೆ ಪೊಲೀಸ್ ಸಿಬ್ಭಂದಿ ಸಿಹಿ ಹಂಚಿ ಶುಭಾಶಯ ಕೋರಿದರು.

ಇತ್ತ ಆಟೋ ಚಾಲಕರು ಕೂಡ ಆಟೋಗಳಿಗೆ ಅಲಂಕರಿಸಿ ಆಯುಧ ಪೂಜೆ ನೆರವೇರಿಸಿದ್ದಾರೆ. ನಗರದ ಬಾಲರಾಜ್ ಅರಸ್ ರಸ್ತೆಯ ಆಟೋ ನಿಲ್ದಾಣದಲ್ಲಿ ಆಯುಧ ಪೂಜೆ ನೆರವೇರಿಸಿದರು. ಇದಲ್ಲದೇ, ನಗರದ ವಿವಿಧ ಕೈಗಾರಿಕೆಗಳು, ಅಂಗಡಿಗಳು, ವರ್ಕ್ ಶಾಪ್ ಗಳಲ್ಲಿ ಮತ್ತು ಜನರು ತಮ್ಮ ತಮ್ಮ ವಾಹನಗಳಿಗೆ, ಲಾರಿ, ಬಸ್ಸುಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳಿಗೆ ಅಲಂಕರಿಸಿ ಪೂಜೆ ನೆರವೇರಿಸಿದರು.

Edited By : Somashekar
Kshetra Samachara

Kshetra Samachara

04/10/2022 03:28 pm

Cinque Terre

2.5 K

Cinque Terre

0

ಸಂಬಂಧಿತ ಸುದ್ದಿ