ಶಿವಮೊಗ್ಗ: ಪ್ರತಿ ಬಾರಿಯೂ ಮೈಸೂರಿನಂತೆ ಶಿವಮೊಗ್ಗದಲ್ಲಿಯೂ ಕೂಡ ದಸರಾ ವೈಭವ ಕಳೆ ಕಟ್ಟೋದು ಮಾಮೂಲು. ಮೈಸೂರು ಹೊರತುಪಡಿಸಿದ್ರೆ, ರಾಜ್ಯದಲ್ಲಿಯೇ, ಶಿವಮೊಗ್ಗ ನಗರದಲ್ಲಿಯೇ ಅತಿ ವಿಜೃಂಭಣೆಯಿಂದ ದಸರಾ ಉತ್ಸವ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ವೈಭವದ ದಸರಾ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ವೈಭವದ ದಸರಾ ನಡೆಯುತ್ತಿದ್ದು, ಪ್ರತಿ ಬಾರಿಯೂ, ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಿಂದ ಗಜಪಡೆಗೆ ಕರೆತಂದು ಭವ್ಯ ಸ್ವಾಗತ ನೀಡಿ, ಜಂಬೂ ಸವಾರಿಗೆ ಅಣಿಗೊಳಿಸಲಾಗುತ್ತದೆ.
ಶಿವಮೊಗ್ಗದ ಕೋಟೆ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಗಜಪಡೆಗೆ ಮಹಾನಗರ ಪಾಲಿಕೆ ಸುನಿತಾ ಅಣ್ಣಪ್ಪ ನೇತೃತ್ವದಲ್ಲಿ ಸಂಪ್ರದಾಯ ಬದ್ಧವಾಗಿ ಸ್ವಾಗತ ಕೋರಿ, ನಗರಕ್ಕೆ ಬರ ಮಾಡಿಕೊಳ್ಳಲಾಗಿದೆ. ಅಂಬಾರಿ ಹೋರುವ ಸಾಗರ, ಭಾನುಮತಿ, ನೇತ್ರ ಆನೆಗಳಿಗೆ ಬರಮಾಡಿಕೊಳ್ಳಲಾಗಿದೆ.
ಪ್ರತಿ ವರ್ಷದಂತೆ, ಈ ಬಾರಿಯೂ ಆನೆ ಅಂಬಾರಿ ವ್ಯವಸ್ಥೆ ಮಾಡಲಾಗಿದ್ದು, ಇದು ಶಿವಮೊಗ್ಗ ನಾಗರೀಕರಿಗೆ ಸಂತಸ ತರಿಸಿದೆ. ಕೊರೊನಾ ಕಾರಣದಿಂದ ಕಳೆದೆರೆಡು ವರ್ಷಗಳು ದಸರಾ ಮೆರವಣಿಗೆ ಮೊಟಕುಗೊಳಿಸಲಾಗಿತ್ತಾದರೂ, ಗಜಪಡೆಗೆ ಸಂಪ್ರದಾಯಬದ್ಧವಾಗಿ ಸ್ವಾಗತ ಕೋರಲಾಗಿತ್ತು. ಆದರೆ ಈ ಬಾರಿ ಬೆಳ್ಳಿಯ ಅಂಬಾರಿ ಹೋರಲು ಸಾಗರ ಆನೆ ರೆಡಿಯಾಗಿದ್ದು, ಇದರ ಜೊತೆಗೆ ನೇತ್ರ ಮತ್ತು ಭಾನುಮತಿ ಆನೆಗಳಿಗೂ ಸಂಪ್ರದಾಯಬದ್ದವಾಗಿ ಆರತಿ ಬೆಳಗಿ, ಪುಷ್ಪನಮನ ಸಲ್ಲಿಸಿ, ಸ್ವಾಗತ ಕೋರಲಾಯಿತು. ಅಲ್ಲದೇ ಮಾವುತರ, ಕಾವಾಡಿಗಳ ಸಹಾಯದಿಂದ ಗಜಪಡೆಗೆ ಭರ್ಜರಿಯಾಗಿ, ಭೋಜನ ಸೇರಿದಂತೆ ಚೆನ್ನಾಗಿ ಆರೈಕೆ ಮಾಡಲು ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲಾಗಿದೆ. ಆನೆಗಳಿಗೆ ಪ್ರಿಯವಾದ ಕಬ್ಬು, ಬೆಲ್ಲ, ಬಾಳೆ ಹಣ್ಣು ಸೇರಿದಂತೆ ಹುಲ್ಲು, ಮುದ್ದೆ, ಸೇರಿದಂತೆ, ಪ್ರೋಟಿನ್ ಯುಕ್ತ ಆಹಾರ ಪದಾರ್ಥಗಳನ್ನು ವಿಶೇಷವಾಗಿ ಆನೆಗಳಿಗೆ ಇಲ್ಲಿ ಸಂಗ್ರಹಿಸಿಡಲಾಗಿದ್ದು, ಆನೆಗಳ ಆಗಮನದಿಂದಾಗಿ ಸ್ಥಳೀಯರು ಫುಲ್ ದಿಲ್ ಖುಷ್ ಆಗಿದ್ದಾರೆ.
PublicNext
04/10/2022 01:11 pm