ಶಿವಮೊಗ್ಗ: ಜಿಂಕೆ ಬೇಟೆಯಾಡಿರುವ ದುಷ್ಕರ್ಮಿಗಳು ಮಾಂಸ ಸಾಗಾಟ ಮಾಡಿ, ಹರಿಯುವ ಹಳ್ಳದ ಬಳಿ ಚರ್ಮವನ್ನು ಬಿಟ್ಟು ಹೋಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಹೊಳೆ ಬೆನವಳ್ಳಿ ತಾಂಡದ ಹೆಚ್.ಪಿ.ಸಿ. ಹಳ್ಳ ತೋಟದ ಬಳಿಯೇ ಈ ಘಟನೆ ನಡೆದಿದ್ದು, ತಾಂಡದ ಹಳ್ಳದ ಬಳಿ ಜಿಂಕೆ ಸುಟ್ಟಿರುವ ಕುರುಹು ಪತ್ತೆಯಾಗಿದೆ. ನಿನ್ನೆ ಜಿಂಕೆ ಮಾಂಸ ಸಾಗಾಟ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಹಳ್ಳದ ಬಳಿ ಚರ್ಮ ಸುಲಿದು ಮಾಂಸ ಸಾಗಿಸಿರಬಹುದೆಂದು ಅನುಮಾನಿಸಲಾಗಿದೆ.
ಇನ್ನು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಗ್ರಾಮಸ್ಥರು ಒತ್ತಾಯಿಸಿದ್ದು, ಜಿಂಕೆ ಮಾಂಸ ಸಾಗಾಟ ಮಾಡಿರುವವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.
PublicNext
18/09/2022 09:22 pm