ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಧಿ ಜಯಂತಿಯಂದೇ ಶಿವಮೊಗ್ಗದಲ್ಲಿ ಅಕ್ರಮ ಗೋ ಸಾಗಾಟದ ವಾಹನ ವಶ

ಶಿವಮೊಗ್ಗ : ಗಾಂಧಿ ಜಯಂತಿ ದಿನದಂದೆ, ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನ ವಶಪಡಿಸಿಕೊಂಡು ರಾಸುಗಳ ರಕ್ಷಣೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪದಲ್ಲಿ ಘಟನೆ. ಭಜರಂಗದಳದ ಕಾರ್ಯಕರ್ತರಿಂದ ಈ ಒಂದು ಭರ್ಜರಿ ಬೇಟೆ ನಡೆದಿದ್ದು, ಹೊಸನಗರ ಕಡೆಯಿಂದ ಶಿರಾಳಕೊಪ್ಪದ ಕಡೆಗೆ ತೆರಳುತ್ತಿದ್ದ ಅಶೋಕ್ ಲೈಲೆಂಡ್ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6 ಎತ್ತಿನ ಹೋರಿ ಹಾಗೂ ಒಂದು ಎಮ್ಮೆಯ ಕರುಗಳನ್ನು ರಕ್ಷಣೆ ಮಾಡಲಾಗಿದೆ. ರಸ್ತೆಗೆ ಅಡ್ಡಗಟ್ಟಿ ವಾಹನವನ್ನು ವಶಕ್ಕೆ ಪಡೆದು, ಭಜರಂಗದಳ ಕಾರ್ಯಕರ್ತರು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಂದು ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಕೆ.ಎ. 17 ಎಎ 0196 ವಾಹನದಲ್ಲಿ ಸುಮಾರು 6 ಎತ್ತಿನ ಹೋರಿ ಹಾಗೂ ಒಂದು ಎಮ್ಮೆಯ ಕರುವನ್ನು ತುಂಬಿಕೊಂಡು ಹೊಸನಗರ ಕಡೆಯಿಂದ ಶಿರಾಳಕೊಪ್ಪದ ಕಡೆಗೆ ರಭಸವಾಗಿ ಹೋಗುತ್ತಿರುವುದನ್ನು ಗಮನಿಸಿದ ಬಟ್ಟೆಮಲ್ಲಪ್ಪದ ಭಜರಂಗದಳದ ಕಾರ್ಯಕರ್ತರಾದ ಅಭಿ, ವಿನಯ್, ಗುರುರಾಜ್, ಸಾಗರ್, ಶಶಿ, ರಮೀತಾ ಹಾಗೂ ವಿಜೇತ್ ಎಂಬುವವರು ವಾಹನ ಅಡ್ಡಗಟ್ಟಿದಾಗ ವಾಹನದಲ್ಲಿರುವ ಚಾಲಕ ಹಾಗೂ ಇನ್ನೊಬ್ಬರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ತಕ್ಷಣ ಅನುಮಾನದಿಂದ ವಾಹನದ ಹಿಂಭಾಗವನ್ನು ನೋಡಿದಾಗ ಅಕ್ರಮವಾಗಿ ಗೋವು ಸಾಗಾಟದ ಬಗ್ಗೆ ಗಮನಕ್ಕೆ ಬಂದು ವಾಹನ ಸಹಿತ ಹೊಸನಗರ ಪೊಲೀಸ್ ಠಾಣೆಗೆ ತರಲಾಗಿದೆ. ಹೊಸನಗರ ಪೊಲೀಸರು ಕೇಸು ದಾಖಲಿಸಿಕೊಂಡು ವಾಹನ ಮಾಲೀಕರಿಗಾಗಿ ಶೋಧ ನಡೆಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

03/10/2022 01:53 pm

Cinque Terre

10.93 K

Cinque Terre

1

ಸಂಬಂಧಿತ ಸುದ್ದಿ