ಶಿವಮೊಗ್ಗ: ಅಕ್ರಮ ನಾಡ ಬಂದೂಕು ಸಂಗ್ರಹ ಮತ್ತು ವನ್ಯಜೀವಿ ಪ್ರಾಣಿಯಲ್ಲಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೇಗಿಲೋಣಿ ಗ್ರಾಮದ ಗಾಳಿಗುಡ್ಡ ಗ್ರಾಮದಲ್ಲಿಯೇ ಈ ಘಟನೆ ನಡೆದಿದ್ದು, ಈ ಪ್ರಕರಣದಲ್ಲೀಗ ಟ್ವಿಸ್ಟ್ ದೊರೆತಿದೆ. ಆಗಸ್ಟ್ 26 ರಂದು ರಾತ್ರಿ 8.30 ರ ವೇಳೆಗೆ ರವೆ ಗ್ರಾಮದ ಅಂಬರೀಶ್, ನಾಗರಾಜ್ ಮತ್ತು ಕೀರ್ತಿ ಎಂಬುವವರು ಸೇರಿ ರಾತ್ರಿ ವೇಳೆ ಬೇಟೆಯಾಡಲು ತೆರಳಿದ್ದರು.
ಗ್ರಾಮದ ಗಾಳಿಗುಡ್ಡ ಹತ್ತುವಾಗ ಅಂಬರೀಷ್ ತನ್ನ ಕೈಯಲ್ಲಿದ್ದ ನಾಡ ಬಂದೂಕಿನ ಟ್ರೀಗರ್ ಗೆ ಕಾಲು ತಾಗಿ ಎದೆಗೆ ಗುಂಡು ಸಿಡಿದಿತ್ತು. ಈ ವೇಳೆ, ಬಂದೂಕು ಹಿಡಿದ ಅಂಬರೀಷ್ ನ ಎದೆಗೆ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೂಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಂಬರೀಷ್ ಪರವಾನಿಗೆ ಹೊಂದಿದ್ದ ಬಂದೂಕು ಮಿಸ್ ಫೈರಿಂಗ್ ಆಗಿದ್ದು, ಪರವಾನಿಗೆ ಹೊಂದಿದ ನಿವೃತ್ತ ಸರ್ಕಾರಿ ನೌಕರರಿಂದ ಎಂದು ತಿಳಿದು ಬಂದಿದೆ. ಬಚಾವ್ ಆಗಲು ಬಹುಶಃ ನಾಟಕೀಯ ಬೆಳವಣಿಗೆ ನೆಡೆದಿತ್ತು. ಈಗ ಈ ನಾಟಕಕ್ಕೆ ನಗರ ಪೊಲೀಸರು ಬ್ರೇಕ್ ಹಾಕಿದ್ದಾರೆ.
PublicNext
20/09/2022 12:08 pm