ಶಿಕಾರಿಪುರ: ಪ್ರೇಯಸಿಯ ಮನೆಯವರ ಕಿರುಕುಳ ತಾಳಲಾರದೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದ ಮದನ್ ಕುಮಾರ್ (24) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ.
ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈರಿಂಗ್ ಕೆಲಸ ಮಾಡಿಕೊಂಡಿದ್ದ ಮದನ್ ಕುಮಾರ್ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣ ಎನ್ನಲಾಗಿದೆ. ಪ್ರಿಯತಮೆಯ ಮನೆಯವರು ಮದನ್‌ಕುಮಾರ್‌ಗೆ ಕಿರುಕುಳ ನೀಡಿದ್ದಾರೆ. ನಮ್ಮ ಮಗಳ ಮೇಲೆ ಮದನ್ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಹೊರಿಸೊದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಪ್ರಕರಣ ಹಿಂಪಡೆಯಲು ಯುವತಿ ಮನೆಯವರು 25 ಲಕ್ಷ ರೂ. ನೀಡಲು ಬೇಡಿಕೆ ಇಟ್ಟಿದ್ದರು. ಇದರಿಂದ ಮನನೊಂದು ನಮ್ಮ ಮಗ ಆತ್ಮಹತ್ಯೆಗೆ ಶರನಾಗಿದ್ದಾನೆ ಎಂದು ಮದನ್ ಕುಟುಂಬಸ್ಥರು ಆರೋಪಿಸಿದ್ದಾರೆ.
PublicNext
16/09/2022 08:57 pm