ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ರಾಜ್ಯಾದ್ಯಂತ ಸೆ. 23ರಂದು ತೆರೆ ಕಾಣಲಿರುವ ಗುರು ಶಿಷ್ಯರು.

ಶಿವಮೊಗ್ಗ : ನಾಯಕನಟ ಶರಣ್ ಹಾಗೂ ನಾಯಕಿ ನಿಶ್ವಿಕಾ ನಾಯ್ಡು ಅಭಿನಯದ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಗುರುಶಿಷ್ಯರು ರಾಜ್ಯಾದ್ಯಂತ ಸೆ. 23ರಂದು ತೆರೆಕಾಣಲಿದೆ.

ಇನ್ನು ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ ಪ್ರಚಾರ ಸಂಬಂಧ ಶನಿವಾರ ನಗರಕ್ಕೆ ಆಗಮಿಸಿದ್ದ ಚಿತ್ರತಂಡ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತಲ್ಲದೆ, ನಗರದ ಹೋಟೆಲ್ ವೊಂದರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಮತ್ತೊಂದು ಟ್ರೇಲರ್ ಬಿಡುಗಡೆಗೊಳಿಸಿದೆ.

ಈ ವೇಳೆ, ಚಿತ್ರದ ಕುರಿತು ಮಾಹಿತಿ ನೀಡಿದ ನಾಯಕ ಶರಣ್, ಜಡೇಶ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು.

ಸಿನಿಮಾ ಎಲ್ಲರಿಗೂ ಮನೋರಂಜನೆ ನೀಡುವುದು ಪಕ್ಕ. ಶರಣ್ ಹಾಗೂ ತಂಡದ ಮೇಲಿರುವ ನಂಬಿಕೆಯನ್ನು ಉಳಿಸುತ್ತೇವೆ ಎಂದು ಭರವಸೆ ನೀಡಿದರು. ನಿರಾಶೆ ಮೂಡಿಸುವುದಿಲ್ಲ. ಒಂದಿಷ್ಟು ವಿಚಾರಗಳನ್ನು ಗುರು ಶಿಷ್ಯರು ಅಳವಡಿಸಿಕೊಳ್ಳಲಾಗಿದೆ. ಚಿತ್ರದಲ್ಲಿ ಗುರು-ಶಿಷ್ಯರ ಸಂಬಂಧ ಹಾಗೂ ದೇಶೀಯ ಕ್ರೀಡೆಯಾಗಿರುವ ಖೋ ಖೋ ಆಟದ ಕುರಿತು ಸಾಕಷ್ಟು ಅಂಶಗಳಿದ್ದು, ಮುಖ್ಯವಾಗಿ ಖೋ ಖೋ ಆಟದ ಕುರಿತು ಮೂಡಿಬರುತ್ತಿರುವ ಮೊಟ್ಟ ಮೊದಲ ಸಿನಿಮಾ ಆಗಿದೆ ಎಂದರು. ಇದೇ ಮೊದಲ ಬಾರಿಗೆ ಮೀಸೆಯೊಂದಿಗೆ ಚಿತ್ರದಲ್ಲಿ ನಟಿಸಿದ್ದೇನೆ. ಪ್ರತಿಯೊಬ್ಬರು ಚಿತ್ರ ಮಂದಿರದಲ್ಲಿ ಗುರಶಿಷ್ಯರು ಚಿತ್ರ ವೀಕ್ಷಿಸುವುದರ ಮೂಲಕ ಹರಸಬೇಕು ಎಂದರು.

ಈ ವೇಳೆ ನಾಯಕಿ ನಟಿ ನಿಶ್ವಿಕಾ ನಾಯ್ಡು ಮಾತನಾಡಿ, ಈಗಾಗಲೇ ಟ್ರೇಲರ್, ಹಾಡು ಸಾಕಷ್ಟು ಮೆಚ್ಚುಗೆ ಪಡೆದಿದೆ. ಸೆ. 23ರಂದು ಸಿನೆಮಾ ತೆರೆಗೆ ಬರುತ್ತಿದ್ದು, ಚಿತ್ರಮಂದಿರದಲ್ಲಿ ಗುರುಶಿಷ್ಯರು ಚಿತ್ರ ನೋಡುವುದರ ಮೂಲಕ ಚಿತ್ರತಂಡಕ್ಕೆ ಹರಸಬೇಕು ಎಂದರು.

ಈ ಸಂದರ್ಭದಲ್ಲಿ ಚಿತ್ರದಲ್ಲಿ ನಟಿಸಿರುವ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

18/09/2022 03:00 pm

Cinque Terre

660

Cinque Terre

0