ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: KSRTC ಬಸ್ ಹಾಗೂ ಓಮಿನಿ ನಡುವೆ ಡಿಕ್ಕಿ; ಓರ್ವ ಸಾವು

ಸಾಗರ ತಾಲೂಕಿನ ಜೋಗ ಸಮೀಪ ಬಸ್ ಹಾಗೂ ಮಾರುತಿ ಓಮ್ನಿ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆತರಲಾಗಿದೆ.

ಜೋಗ ವರ್ಕ್ ಮನ್ ಬ್ಲಾಕ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಮಾರುತಿ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಬಳೆ ಪದ್ಮಾವತಿ ದೇವಸ್ಥಾನದ ಅರ್ಚಕನಾಗಿದ್ದ ದೇವ ಪೂಚಾರಿ(60) ಮೃತಪಟ್ಟವರಾಗಿದ್ದಾರೆ.

ಇಲ್ಲಿನ ಬಳೆ ಪದ್ಮಾವತಿ ದೇವಾಲಯದ ಧರ್ಮದರ್ಶಿ ವೀರಾ ರಾಜೇಂದ್ರ ಜೈನ್(70) ಗಂಭೀರ ಗಾಯಗೊಂಡಿದ್ದಾರೆ. ಚಿಕ್ಕಮಗಳೂರಿನಿಂದ ಕಾರವಾರ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್, ಜೋಗದಿಂದ ಬಳೆ ಪದ್ಮಾವತಿಗೆ ತೆರಳುತ್ತಿದ್ದ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಸರಿಯಾದ ಸಮಯಕ್ಕೆಬಾರದ ಅಂಬುಲೆನ್ಸ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

22/09/2022 06:25 pm

Cinque Terre

34.89 K

Cinque Terre

0