ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳಿಗೆ ಆಗಸ್ಟ್‌ನಲ್ಲಿ ನಿಷೇಧ!

ಮೆಟಾ ಒಡೆತನದ ವಾಟ್ಸ್‌ಆ್ಯಪ್, ದೇಶದಲ್ಲಿ 23 ಲಕ್ಷಕ್ಕೂ ಅಧಿಕ ಖಾತೆಗಳಿಗೆ ಆಗಸ್ಟ್‌ನಲ್ಲಿ ನಿಷೇಧ ಹೇರಿದೆ. ಆಗಸ್ಟ್ 1 2022 ಮತ್ತು ಆಗಸ್ಟ್ 31 2022 ರ ನಡುವೆ 2,328,000 ವಾಟ್ಸ್ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ.

ವಾಟ್ಸ್‌ಆ್ಯಪ್ ನಿಯಮಗಳನ್ನು ಪಾಲಿಸದ ಮತ್ತು ಸರ್ಕಾರದ ನಿಬಂಧನೆಗಳನ್ನು ಉಲ್ಲಂಘಿಸಿದ ಖಾತೆಗಳ ವಿರುದ್ಧ ಕಂಪನಿ ಸೂಕ್ತ ಕ್ರಮ ಕೈಗೊಂಡಿದೆ. ಕಳೆದ ಆಗಸ್ಟ್ ತಿಂಗಳೊಂದರಲ್ಲಿಯೇ 23,28,000 ವಾಟ್ಸ್‌ಆ್ಯಪ್ ಖಾತೆಗಳಿಗೆ ನಿಷೇಧ ಹೇರಲಾಗಿದೆ. ಆ ಪೈಕಿ,1,008,000 ಖಾತೆಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ.

ವಾಟ್ಸ್‌ಆ್ಯಪ್, ದೇಶದಲ್ಲಿ ನಕಲಿ ಮತ್ತು ದ್ವೇಷ ಬಿತ್ತುವ ಹಾಗೂ ನಿಬಂಧನೆಗಳನ್ನು ಪಾಲಿಸದ ಖಾತೆಗಳ ವಿರುದ್ಧ ನಿರಂತರ ಕ್ರಮ ಕೈಗೊಳ್ಳುತ್ತಿದೆ ಎಂದು ಮೆಟಾ ಹೇಳಿದೆ.

Edited By : Abhishek Kamoji
PublicNext

PublicNext

02/10/2022 04:36 pm

Cinque Terre

26.21 K

Cinque Terre

0