ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಮಿ ರಕ್ಷಿಸಲು ಮುಂದಾದ NASA ಪ್ಲಾನ್ ಯಶ : DART ನೌಕೆಯಿಂದ ಕ್ಷುದ್ರಗ್ರಹಕ್ಕೆ ಡಿಕ್ಕಿ

ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASAದ ನೌಕೆ ಇಂದು ಡಿಮಾರ್ಫಾಸ್’ ಹೆಸರಿನ ಕ್ಷುದ್ರಗ್ರಹವನ್ನು ಡಿಕ್ಕಿ ಹೊಡೆದಿದೆ. ಸಂಭಾವ್ಯ ಕ್ಷುದ್ರಗ್ರಹ ಅಥವಾ ಧೂಮಕೇತುವಿನ ಅಪಾಯಗಳಿಂದ ಭೂಮಿಯನ್ನು ರಕ್ಷಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವ ವಿಶ್ವದ ಮೊದಲ ಡಬಲ್ ತಂತ್ರಜ್ಞಾನವನ್ನು ಪರೀಕ್ಷಿಸುವ ಮೊದಲ ಡಬಲ್ ಅಸ್ಟೆರೊಯ್ಡ್ ರೆಡೈರೆಕ್ಷನ್ ಟೆಸ್ಟ್ (DART) ಅನ್ನು ನಡೆಸಲಾಗಿದೆ.

ಬಾಹ್ಯಾಕಾಶ ನೌಕೆಯು 530 ಅಡಿ ಅಗಲದ ಕ್ಷುದ್ರಗ್ರಹಕ್ಕೆ ಅಪ್ಪಳಿಸಿತು. ಈ ಕಾರ್ಯಾಚರಣೆ ಭೂಮಿಯಿಂದ 7 ಮಿಲಿಯನ್ ಮೈಲುಗಳ (11 ಮಿಲಿಯನ್ ಕಿಲೋಮೀಟರ್) ದೂರದಲ್ಲಿ ನಡೆದಿದೆ.6.5 ಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು (Asteroid) ಭೂಮಿಗೆ ಅಪ್ಪಳಿಸಿದ್ದರಿಂದ ಅದರ ಪರಿಣಾಮ ಎಷ್ಟೊಂದು ಭೀಕರವಾಗಿತ್ತು ಎಂದರೆ, ಡೈನೋಸಾರ್ ಗಳ ಸಂತತಿಯೇ ನಾಶವಾಗಿ ಹೋಗಿತ್ತು. ಆದರೆ ಇದೀಗ ನಾಸಾ (NASA) ಇಂತಹ ಆಪತ್ತುಗಳನ್ನು ತಡೆಯುವ ಸಲುವಾಗಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ.

ಭವಿಷ್ಯದಲ್ಲಿ ಅನ್ಯ ಲೋಕದ ವಸ್ತುಗಳು ಭೂಮಿಯೆಡೆಗೆ ನೇರವಾಗಿ ಬರುವ ಸಂದರ್ಭ ಅವುಗಳ ದಿಕ್ಕು ತಪ್ಪಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.ನಾಸಾ 2021ರ ನವೆಂಬರ್ ನಲ್ಲಿ ಡಬಲ್ ಆಸ್ಟರಾಯ್ಡ್ ರೀಡೈರೆಕ್ಷನ್ ಟೆಸ್ಟ್(DART) ಅನ್ನು ಪ್ರಾರಂಭಿಸಿತ್ತು. 344 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡ ಈ ನೌಕೆ ಭೂಮಿಯಿಂದ 9 ದಶಲಕ್ಷ ಕಿ.ಮೀ ಕ್ರಮಿಸಿ ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ.

ಕ್ಷುದ್ರಗ್ರಹಕ್ಕೆ ಹೋಲಿಸಿದರೆ ಡಾರ್ಟ್ ನೌಕೆ ಚಿಕ್ಕದಾಗಿದೆ. ಆದರೆ ಅದು 600 ಕೆಜಿ ತೂಕ ಹಾಗೂ 163 ಮೀ. ಅಗಲದ ಇದ್ದು, ಗಂಟೆಗೆ ಸುಮಾರು 22,500 ಕಿ.ಮೀ. ವೇಗದಲ್ಲಿ ಚಲಿಸಿದ್ದರಿಂದ ಕ್ಷುದ್ರಗ್ರಹದ ದಿಕ್ಕು ತಪ್ಪಿಸಲು ಸಾಧ್ಯವಾಗಿದೆ ಎಂದು ಗ್ರಹಗಳ ವಿಜ್ಞಾನಿ ನ್ಯಾನ್ಸಿ ಚಾಬೋಟ್ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

27/09/2022 01:43 pm

Cinque Terre

85.25 K

Cinque Terre

2

ಸಂಬಂಧಿತ ಸುದ್ದಿ