ಮದುವೆ ಎನ್ನುವುದು ಪ್ರತಿಯೊಬ್ಬರ ಕನಸ್ಸು. ಅದು ಹೀಗೆ ಇರಬೇಕು ಹಾಗೆ ಇರಬೇಕು ಎನ್ನುವ ಹತ್ತಾರು ಆಸೆಗಳಿರುತ್ತವೆ. ಮದುವೆ ಮಾಡಿಕೊಳ್ಳುವ ಜಾಗ ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾಗಿಯೇ ಮದುವೆ ಮನೆ ಅಲಂಕಾರ ಒಂದು ದೊಡ್ಡ ಕೆಲಸವೆಂದರೆ ತಪ್ಪಾಗಲಾರದು. ಸದ್ಯ ಈ ಮಹತ್ತರವಾದ ಜವಾಬ್ದಾರಿಯಿಂದ ನುನುಚಿಕೊಳ್ಳಲು ಸೂಪರ್ ಐಡಿಯಾವೊಂದು ವೈರಲ್ ಆಗಿದೆ.
ಹೌದು ಚಲಿಸುವ ಮದುವೆ ಮನೆವೊಂದಿದೆ. ಇದನ್ನು ಕಂಡ ನೆಟ್ಟಿಗರು ಶಾಕ್ ಕೂಡಾ ಆಗಿದ್ದಾರೆ. ಆ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 40 ಅಡಿ ಉದ್ದದ ವಸ್ತು ಸಾಗಾಣಿಕಾ ಕಂಟೇನರ್ ನಲ್ಲಿ ಮಡಚಬಹುದಾದ ಭಾಗಗಳಿವೆ. ಇದನ್ನು ಬಿಚ್ಚಿ ಜೋಡಿಸಿದರೆ 1200 ಚದರ ಅಡಿ ವಿಸ್ತಾರದ ಮದುವೆ ಮನೆ ಸಿದ್ಧವಾಗುತ್ತದೆ.
ಸುಮಾರು 200 ಕುರ್ಚಿಗಳ ಸಾಮರ್ಥ್ಯ ಹೊಂದಿರುವ ಇದರ ಈ ಮದುವೆ ಲಾರಿಯಲ್ಲಿ 2 ಎ.ಸಿ ಗಳನ್ನು ಅಳವಡಿಸಲಾಗಿದೆ. ಮದುವೆಗೆ ಕಲ್ಯಾಣ ಮಂಟಪ ಸಿಗದವರು ಈ ಲಾರಿ ಮಂಟಪ ಬಳಸಬಹುದಾಗಿದೆ. ಇದನ್ನು ತಯಾರಿಸಿದವರನ್ನು ನಾನು ಭೇಟಿಯಾಗಬೇಕು ಎಂದು ಸ್ವತಃ ಉದ್ಯಮಿ ಆನಂದ್ ಮಹೀಂದ್ರಾ ಹೇಳಿದ್ದಾರೆ.
PublicNext
26/09/2022 01:34 pm