ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ್ಯಪ್‌ನಲ್ಲಿದ್ದ ಬಗ್‌ ಕಂಡುಹಿಡಿದು ಕೊಟ್ಟ ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್‌ನಿಂದ 38 ಲಕ್ಷ ರೂ. ಬಹುಮಾನ

ರಾಜಸ್ಥಾನ: ಜೈಪುರದ ನೀರಜ್ ಶರ್ಮಾ ಎಂಬ ವಿದ್ಯಾರ್ಥಿ, ಕೋಟ್ಯಂತರ ಜನರ ಸಾಮಾಜಿಕ ಜಾಲತಾಣದಲ್ಲಿನ ಖಾತೆಗಳನ್ನು ಹ್ಯಾಕ್ ಆಗದಂತೆ ಉಳಿಸಿದ್ದಕ್ಕಾಗಿ ಇನ್‌ಸ್ಟಾಗ್ರಾಮ್‌ನಿಂದ 38 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.

ಹೌದು.. ಮಾಹಿತಿಯ ಪ್ರಕಾರ, ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ದೋಷವನ್ನು ಕಂಡು ಹಿಡಿದುಕೊಟ್ಟಿದ್ದಾರೆ, ಫೇಸ್‌ಬುಕ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಬಗ್‌ ಕಂಡುಬಂದಿದ್ದು,ಅದರಿಂದ ಖಾತೆದಾರರ ಟಫ್‌ ಪಾಸ್‌ವರ್ಡ್ ಇದ್ರು, ರೀಲ್‌ನ ಥಂಬ್‌ನೇಲ್ ಅನ್ನು ಯಾವುದೇ ಖಾತೆಯಿಂದ ಬದಲಾಯಿಸಬಹುದಿತ್ತು. ಇದರಿಂದಾಗಿ ಆ್ಯಪ್ ಅಕೌಂಟ್‌ ಹ್ಯಾಕ್ ಆಗುವ ಸಾಧ್ಯತೆ ಇತ್ತು.

ಈ ತಪ್ಪಿನ ಬಗ್ಗೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗೆ ತಿಳಿಸಿರುವ ಶರ್ಮಾ, ಇದು ಅಧಿಕೃತ ಎಂದು ಕಂಡುಹಿಡಿದ ನಂತರ, ಈ ಕೆಲಸಕ್ಕಾಗಿ ಅವರಿಗೆ 38 ಲಕ್ಷ ರೂ. ಬಹುಮಾನ ನೀಡಿದ್ದಾರೆ..

ಇನ್ನು ಈ ಬಗ್ಗೆ ಮಾತನಾಡಿದ ನೀರಜ್ ಶರ್ಮಾ, ಕಳೆದ ವರ್ಷ ಡಿಸೆಂಬರ್‌ನಲ್ಲಿ, ನಾನು Instagram ಅಕೌಂಟ್‌ ತಪ್ಪುಗಳನ್ನು ಹುಡುಕಲು ಪ್ರಾರಂಭಿಸಿದೆ. ಬಹಳ ಪರಿಶ್ರಮದ ನಂತರ, ಸಮಸ್ಯೆ ಬಗ್ಗೆ ತಿಳಿಯಿತು. ನಂತರ, ನಾನು ಆ್ಯಪ್‌ ಮಾಹಿತಿ ಕೊಟ್ಟಿದ್ದೇನೆ ಎಂದರು

ಸದ್ಯ ಶರ್ಮಾ ಕಾರ್ಯಕ್ಕೆ ಸಂಸ್ಥೆ ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

Edited By : Abhishek Kamoji
PublicNext

PublicNext

19/09/2022 03:49 pm

Cinque Terre

20.96 K

Cinque Terre

0