ಮುಂಬಯಿ: ಇದೇ ಮೊದಲ ಬಾರಿಗೆ ವಾಟ್ಸ್‌ಆ್ಯಪ್‌ನಲ್ಲಿ ಶಾಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮುಂದಾಗಿದೆ. ಜಿಯೋ ಮಾರ್ಟ್ ಇನ್ನು ವಾಟ್ಸ್‌ಆ್ಯಪ್‌ನಲ್ಲೇ ಸಿಗಲಿದ್ದು, ಜಿಯೋ ಮಾರ್ಟ್‌ನ ಎಲ್ಲ ದಿನಸಿ ಕ್ಯಾಟಲಾಗ್ ಇಲ್ಲೇ ಕಾಣಿಸಲಿದೆ. ಇದರಲ್ಲೇ ವಸ್ತುಗಳನ್ನು ಕಾರ್ಟ್‌ಗೆ ಸೇರಿಸಬಹುದು ಮತ್ತು ಹಣ ಪಾವತಿಯನ್ನೂ ಮಾಡಬಹುದು.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್‌ಬರ್ಗ್ ಈ ವಿಷಯವನ್ನು ಘೋಷಿಸಿದ್ದಾರೆ. "ಭಾರತದಲ್ಲಿ ಜಿಯೋ ಮಾರ್ಟ್ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ಹೆಮ್ಮೆಯಾಗುತ್ತಿದೆ. ವಾಟ್ಸ್‌ಆ್ಯಪ್‌ನಲ್ಲಿ ಇದೇ ಮೊದಲ ಬಾರಿಗೆ ಸಮಗ್ರ ಶಾಪಿಂಗ್ ಅನುಭವವನ್ನು ನಾವು ಒದಗಿಸುತ್ತಿದ್ದೇವೆ," ಎಂದು ಝುಕರ್‌ಬರ್ಗ್ ಹೇಳಿದ್ದಾರೆ.
ಜಿಯೋ ಮಾರ್ಟ್‌ನಿಂದ ದಿನಸಿಯನ್ನು ವಾಟ್ಸ್‌ಆ್ಯಪ್‌ನಲ್ಲೇ ಖರೀದಿ ಮಾಡಬಹುದು. ಬ್ಯುಸಿನೆಸ್ ಮೆಸೇಜಿಂಗ್ ಸೌಲಭ್ಯದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ ಮತ್ತು ಈ ರೀತಿಯ ಚಾಟ್ ಅಧರಿತ ಅನುಭವಗಳು ಜನರನ್ನು ತಲುಪಿ, ಮುಂದಿನ ದಿನಗಳಲ್ಲಿ ಉದ್ಯಮಗಳು ಸಂವಹನ ನಡೆಸುವ ವಿಧಾನ ಬದಲಾಗಲಿದೆ ಎಂದು ಅವರು ತಿಳಿಸಿದ್ದಾರೆ.
PublicNext
30/08/2022 05:02 pm