ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಚಿರತೆ ಹಿಡಿಯಲು ಬೆಂಗಳೂರನಿಂದ ಬಂದ "ಡ್ರೋಣ್" ನುರಿತರು

ಬೆಳಗಾವಿ: ಗಾಲ್ಫ್ ಮೈದಾನದಲ್ಲಿ ಶರವೇಗದಲ್ಲಿ ಮರೆಯಾಗಿರುವ ಚಿರತೆಯ ಶೋಧ ಕಾರ್ಯಾಚರಣೆಗೆ ಬೆಂಗಳೂರಿನಿಂದ ತರಿಸಲಾದ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಹೇಳಿದರು.

ಮಂಗಳವಾರ ನಗರದ ಗಾಲ್ಫ್ ಮೈದಾನದ ಪ್ರದೇಶದಲ್ಲಿ ಅರಣ್ಯ ಇಲಾಖೆಯಲ್ಲಿ ನಡೆಸುತ್ತಿರುವ ಚೀತಾ ಕಾರ್ಯಾಚರಣೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿರತೆ ಕಾರ್ಯಾಚರಣೆ ಹಿನ್ನೆಲೆ ಗಾಲ್ಫ್ ಗ್ರೌಂಡ್ ಸುತ್ತಮುತ್ತಲಿನ 22 ಶಾಲೆಗಳಿಗೆ ಜಿಲ್ಲಾಡಳಿತ ರಜೆ ಮುಂದುವರಿಸಲಾಗಿದೆ. ನಿನ್ನೆ ಮತ್ತೆ ಪ್ರತ್ಯಕ್ಷವಾಗಿರೋ ಚಿರತೆ ಗಾಲ್ಫ್ ಗ್ರೌಂಡ್ ಸೇರಿಕೊಂಡಿದೆ‌. ಆಪರೇಶನ್ ಚೀತಾಗೆ ಎರಡು ಆನೆಗಳ ಬಳಕೆ ಮಾಡಲಾಗುವುದು. ಇಂದು ಸಂಜೆ ಬರುವ ನಿರೀಕ್ಷೆ ಇದೆ ಎಂದರು.

ಜನರು ಮತ್ತು ವನ್ಯ ಜೀವಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಶಾಲಾ ಮಕ್ಕಳ ಹಿತದೃಷ್ಠಿಯಿಂದ ಈಗಾಗಲೇ ಶಾಲಾ ಮಕ್ಕಳ ಪೋಷಕರು ಹಾಗೂ ಶಿಕ್ಷಕರ ಸಭೆ ಕರೆದು ಆನ್ ಲೈನ್ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದೇವೆ ಎಂದರು.

Edited By : Somashekar
PublicNext

PublicNext

23/08/2022 12:41 pm

Cinque Terre

31.73 K

Cinque Terre

2