ವಡೋದರಾ: ಗುಜರಾತ್ ನ ಆನಂದ್ ಜಿಲ್ಲೆಯ ವಿವಿಧ ನಾಲ್ಕು ಸ್ಥಳಗಳಲ್ಲಿ ಬಾಹ್ಯಾಕಾಶದಿಂದ ನಿಗೂಢ ಲೋಹದ ಚೆಂಡುಗಳು ಬಿದ್ದಿವೆ. ಇದರಿಂದ ಗಾಬರಿಗೊಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದ ಪೊಲೀಸರು ಲೋಹದ ಚಂಡುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಈ ಚಂಡುಗಳು ರಾಕೆಟ್ ನ ಭಾಗವಾಗಿರಬಹುದು ಎಂದು ಸೂಚಿಸಿರುವ ಪೊಲೀಸರು ರಾಕೆಟ್ ಗಳಲ್ಲಿ ಇಂಧನ ಮತ್ತು ಇತರ ವಸ್ತುಗಳನ್ನು ಸಾಗಿಸಲು ಅವುಗಳನ್ನು ಬಳಸಲಾಗುತ್ತದೆ. ಕಳೆದ ತಿಂಗಳು ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಚೀನಾದ ರಾಕೆಟ್ ನ ಅವಶೇಷಗಳು ಬಿದ್ದಿದ್ದವು ಎಂದು ಹೇಳಿದ್ದಾರೆ.
PublicNext
13/05/2022 10:16 am