ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಮೊದಲ Public WiFi ಗ್ರಾಮ : ಮೈಸೂರಿನ ರಮ್ಮನಹಳ್ಳಿ

ಮೈಸೂರು: ಆಧುನಿಕ ಜಗತ್ತಿನಲ್ಲಿ ಎಲ್ಲವೂ ಡಿಜಟಲಿಕರಣ ಎಲ್ಲವೂ ಆನ್ ಲೈನ್ ವರ್ಕ್ ಹಾಗಾಗಿ ಅಂತರ್ಜಾಲದ ಬಳಿಕೆ ಈ ಕಾಲದಲ್ಲಿ ಅನಿವಾರ್ಯ. ಇದನ್ನು ಅರಿತ ಭಾರತ್ ಸಂಚಾರ್ ನಿಗಮ ನಿಯಮಿತವು (ಬಿಎಸ್ ಎನ್ ಎಲ್) ಸಾರ್ವಜನಿಕ ವೈ-ಫೈ ನೀತಿಯಡಿ 'ಸಾರ್ವಜನಿಕ ದತ್ತಾಂಶ ಕೇಂದ್ರ'ವನ್ನು (ಪಿಡಿಒ) ರಮ್ಮನಹಳ್ಳಿಯಲ್ಲಿ ಸ್ಥಾಪಿಸಿದೆ.

ಇನ್ನು ರಮ್ಮನಹಳ್ಳಿ ರಾಜ್ಯದಲ್ಲಿ ಬಿಎಸ್ ಎನ್ ಎಲ್ ವತಿಯಿಂದ ಸಾರ್ವಜನಿಕ ವೈ ಫೈ ಸೌಲಭ್ಯ ಪಡೆದ ಮೊದಲ ಗ್ರಾಮವೆಂಬ ಹೆಗ್ಗಳಿಕೆಗೆ ಮೈಸೂರಿನ ರಮ್ಮನಹಳ್ಳಿ ಪಾತ್ರವಾಗಿದೆ. ಬಿಎಸ್ ಎನ್ ಎಲ್ ಮೈಸೂರು ಆಪ್ಟಿಕಲ್ ಫೈಬರ್ (Optical Fiber) ಸಂಪರ್ಕದ ಮೂಲಕ ರಮ್ಮನಹಳ್ಳಿಯ 8 ಕಡೆ ಈ ಕೇಂದ್ರ ತಲೆ ಎತ್ತಿದ್ದು, 32 ಕಡೆ ವೈ-ಫೈ ಹಾಟ್ ಸ್ಪಾಟ್ ಇರಲಿದೆ.

ಈ ಯೋಜನೆ ಮೂಲಕ ರಮ್ಮನಹಳ್ಳಿ ಗ್ರಾಮಸ್ಥರು ವೋಚರ್ ರೀಚಾರ್ಜ್ ಮಾಡಿಸಿಕೊಂಡು 50 ಎಂಬಿಪಿಎಸ್ ವೇಗದವರೆಗೆ ಇಂಟರ್ನೆಟ್ ಸಂಪರ್ಕ ಪಡೆಯಬಹುದು. ಈ ಯೋಜನೆಯಡಿ 69 ರೂ. ಪಾವತಿಸಿ 30 ಜಿಬಿ ಡಾಟಾವನ್ನು 30 ದಿನಗಳ ಅವಧಿಗೆ ಪಡೆಯಬಹುದು. ಎಂದು ಬಿಎಸ್ ಎನ್ ಎಲ್ ಹಿರಿಯ ಪ್ರಧಾನ ವ್ಯವಸ್ಥಾಪಕ ರಾಜಕುಮಾರ್ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

02/03/2022 04:32 pm

Cinque Terre

32.95 K

Cinque Terre

0

ಸಂಬಂಧಿತ ಸುದ್ದಿ