ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉ.ಕ ಕರ್ನಾಟಕದ ಯುವಕನ ಸಾಧನೆ: ವಿಶ್ವದ ಕಡಿಮೆ ವೆಚ್ಚದ ವಾಟರ್ ಪಿಲ್ಟರ್ ಪರಿಚಯಿಸಿದ ನಿರಂಜನ...!

ಬೆಳಗಾವಿ/ಹುಬ್ಬಳ್ಳಿ: ಪ್ರಸ್ತುತ ದಿನಮಾನಗಳಲ್ಲಿ ಮಾತ್ರವಲ್ಲದೆ ಆದಿಕಾಲದಿಂದಲೂ ಕೂಡ ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಅವಶ್ಯಕ ಎಂಬುವುದನ್ನು ನಾವು ನಂಬಿದ್ದೇವೆ. ಅಲ್ಲದೇ ಶುದ್ಧ ನೀರು ಕುಡಿಯಲು ಹೋದರೆ ಜೇಬಿಗೆ ಕತ್ತರಿ ಬಿಳುತ್ತದೆ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಅಂತಹ ಗೊಂದಲಗಳಿಗೆ ಬ್ರೇಕ್ ಹಾಕಿ ವಿನೂತನ ಪ್ರಯೋಗದ ಮೂಲಕ ವಿಶ್ವದ ಅತಿಕಡಿಮೆ ವೆಚ್ಚದ ವಾಟರ್ ಫಿಲ್ಟರ್ ಪರಿಚಯಿಸಿದ್ದಾನೆ.

ಹೌದು.. ಶುದ್ಧ ನೀರು ಸೇವಿಸಿದರೆ ಮಾತ್ರ ಉತ್ತಮ ಆರೋಗ್ಯ ‌ಕಾಪಾಡಿಕೊಳ್ಳಲು ಸಾಧ್ಯ.‌ ಹೀಗಾಗಿ ಜನರು ವಾಟರ್ ಫಿಲ್ಟರ್, ಅಕ್ವಾಗಾರ್ಡ್ ಸೇರಿದಂತೆ ಹಲವು ಶುದ್ಧಕ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಆದರೆ ಬಡ ಜನರಿಗೆ ಈ ದುಬಾರಿ ಯಂತ್ರಗಳ ಖರೀದಿ ತುಸು ಕಷ್ಟವೇ. ಈ ಸಮಸ್ಯೆಗೆ ಮುಕ್ತಿ ನೀಡಲೆಂದೇ ಬೆಳಗಾವಿಯ ಯುವಕ ಫಿಲ್ಟರ್ ಒಂದನ್ನು ತಯಾರಿಸಿದ್ದಾರೆ. ಬೆಳಗಾವಿಯ ಖಾಸಭಾಗ ನಿವಾಸಿ ನಿರಂಜನ್ ಕಾರಗಿ ಅವರ ವಾಟರ್ ಫಿಲ್ಟರ್ ದೇಶ - ವಿದೇಶಗಳಲ್ಲಿ ಹೆಸರು ವಾಸಿಯಾಗಿದೆ. 24 ವರ್ಷ ವಯಸ್ಸಿನ ನಿರಂಜನ್ ಸಿಂಪಲ್ ವಾಟರ್ ಫಿಲ್ಟರ್ ಮೂಲಕ ಇಂದು ಕೋಟ್ಯಂತರ ರೂಪಾಯಿ ‌ವಹಿವಾಟು ನಡೆಸುತ್ತಿದ್ದಾರೆ. ಇಂಜಿನಿಯರಿಂಗ್ ಪದವಿ ಪೂರೈಸಿರುವ ಇವರು, ತಾವು ತಯಾರಿಸಿದ ಫಿಲ್ಟರ್​ಗೆ ನಿರ್ನಲ್ ಎಂದು ಹೆಸರಿಟ್ಟಿದ್ದಾರೆ. ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಶುದ್ಧ ನೀರು ಸಿಗುವ ಯಂತ್ರ ನಿರ್ನಲ್ ಬ್ರ್ಯಾಂಡ್ ಅಡಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಇನ್ನೂ ಬೆಳಗಾವಿಯ ಉದ್ಯಮಬಾಗ್​ದಲ್ಲಿ ನಿರ್ನಲ್ ಕಂಪನಿ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡಿದ್ದಾರೆ. ಈವರೆಗೆ 2 ಲಕ್ಷಕ್ಕೂ ಅಧಿಕ ಫಿಲ್ಟರ್ ಉತ್ಪಾದಿಸಿ ಮಾರಾಟ ಮಾಡಿದ್ದಾರೆ. ಬೆಳಗಾವಿಯ ಅಂಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಪದವಿ ಪಡೆದಿರುವ ನಿರಂಜನ್ ಕಾಲೇಜು ದಿನಗಳಲ್ಲೇ ಫಿಲ್ಟರ್ ಅನ್ವೇಷಣೆ ಮಾಡಿರುವುದು ವಿಶೇಷ.

2017ರಿಂದ ಸ್ಥಳೀಯ ಕಚ್ಚಾವಸ್ತುಗಳನ್ನು ಬಳಸಿಕೊಂಡು ಫಿಲ್ಟರ್ ತಯಾರಿಸುತ್ತಿದ್ದು, ಕೇವಲ 2 ಸಾವಿರ ರೂ. ಬಂಡವಾಳ ಹಾಕಿ ಉದ್ಯಮ ಆರಂಭಿಸಿದ್ದರು. 30 ರೂಪಾಯಿಗೆ ಸಿಗುವ ಫಿಲ್ಟರ್ 100 ಲೀಟರ್ ನೀರು ಶುದ್ಧೀಕರಣ ಮಾಡಬಹುದು.‌‌ ಅಮೆರಿಕ, ಶ್ರೀಲಂಕಾ, ಮಲೇಷ್ಯಾ ಸೇರಿದಂತೆ ನಿರ್ನಲ್ ಉತ್ಪನ್ನಗಳು 15 ದೇಶಗಳಿಗೆ ರಫ್ತಾಗುತ್ತಿವೆ. ದೇಶದ ವಿವಿಧ ಭಾಗಗಳಿಗೂ ನಿರ್ನಲ್ ಫಿಲ್ಟರ್ ಪೂರೈಕೆ ಆಗುತ್ತಿದೆ. ಅಲ್ಲದೇ ಸಿಆರ್​ಪಿಎಫ್ ಕಮಾಂಡರ್​ಗಳು ನಿತ್ಯ ಇದೆ ಫಿಲ್ಟರ್ ಬಳಸುತ್ತಿದ್ದಾರೆ. 160 ದೇಶಗಳು ಪಾಲ್ಗೊಂಡಿದ್ದ ವಿಶ್ವ​ ಇನೋವೇಶನ್ ಕಾಂಗ್ರೆಸ್ 2020 ಸ್ಪರ್ಧೆಯಲ್ಲಿ ಟಾಪ್ 50 ಆವಿಷ್ಕಾರಗಳಲ್ಲಿ ನಿರ್ನಲ್ ಫಿಲ್ಟರ್ ಕೂಡ ಒಂದಾಗಿದೆ.

Edited By : Shivu K
PublicNext

PublicNext

28/01/2022 09:30 pm

Cinque Terre

101.63 K

Cinque Terre

14

ಸಂಬಂಧಿತ ಸುದ್ದಿ