ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೇಬಿನಲ್ಲಿ ಬ್ಲಾಸ್ಟ್ ಆಯ್ತು ಒನ್ ಪ್ಲಸ್ ಮೊಬೈಲ್ : ವ್ಯಕ್ತಿ ಬಚಾವ್

ಸದ್ಯ ಟ್ರೆಂಡಿಂಗ್ ನಲ್ಲಿರುವ ಮೊಬೈಲ್ ಅಂದ್ರೆ ಒನ್ ಪ್ಲಸ್ ಇತ್ತೀಚೆಗೆ ಒನ್ ಪ್ಲಸ್ ಕಂಪನಿಯ ಸ್ಮಾರ್ಟ್ ಫೋನ್ ಗಳು ಸ್ಫೋಟಗೊಳ್ಳುತ್ತಿರುವ ಪ್ರಕರಣದ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ.

ಕೆಲವು ತಿಂಗಳ ಹಿಂದೆ ದೆಹಲಿ ಮೂಲದ ವಕೀಲರ ಒನ್ ಪ್ಲಸ್ ನಾರ್ಡ್ 2 5G ಸ್ಮಾರ್ಟ್ ಪೋನ್ ಅವರ ಜೇಬಿನಲ್ಲಿಯೇ ಸ್ಫೋಟಗೊಂಡ ಬಗ್ಗೆ ವರದಿಯಾಗಿತ್ತು. ಇದೀಗ ಒನ್ ಪ್ಲಸ್ ನಾರ್ಡ್ CE ಫೋನ್ ಬ್ಲಾಸ್ಟ್ ಆಗಿದೆ. ಅದೃಷ್ಟವಶಾತ್ ಬಳೆದಾರನಿಗೆ ಯಾವುದೇ ತೊಂದರೆಯಾಗದೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ದುಶ್ಯಂತ್ ಗೋಸ್ವಾಮಿ ಎಂಬವರು ಆರು ತಿಂಗಳ ಹಿಂದೆ OnePlus Nord CE ಖರೀದಿಸಿದ್ದರು ಮತ್ತು ಅದನ್ನು ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ ಈ OnePlus Nord CE ಸ್ಮಾರ್ಟ್ ಫೋನ್ ಜೇಬಿನಲ್ಲಿರಿಸಿದ್ದಾಗಲೇ ಸ್ಫೋಟಗೊಂಡಿದೆ ಈ ಕುರಿತು ಅವರು ಟ್ವಿಟರ್ ಮತ್ತು ಲಿಂಕ್ಡ್ ಇನ್ ನಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.

ಈ ಘಟನೆ ಬಗ್ಗೆ ಒನ್ ಪ್ಲಸ್ ಕಂಪನಿ ಪ್ರತಿಕ್ರಿಯಿಸಿದೆ ಮತ್ತು ಬದಲಿ ಹ್ಯಾಂಡ್ ಸೆಟ್ ಕಳುಹಿಸುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಮಾತನಾಡಿದ ದುಶ್ಯಂತ್ ಗೋಸ್ವಾಮಿ "ಎಲ್ಲರ ಸಹಾಯವನ್ನು ನಾನು ಪ್ರಶಂಸಿಸುತ್ತೇನೆ" ಎಂದು ಹೇಳಿದ್ದಾರೆ.

ಒನ್ ಪ್ಲಸ್ ತಂಡವು ನನಗೆ ಕರೆ ಮಾಡಿ ಮಂಗಳವಾರದೊಳಗೆ ನನಗೆ ಹೊಸ ಸ್ಮಾರ್ಟ್ಫೋನನ್ನು ಕಳುಹಿಸುವುದಾಗಿ ಭರವಸೆ ನೀಡಿದೆ ಎಂದು ಟ್ವಿಟರ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಯು ಈ ಸ್ಮಾರ್ಟ್ ಫೋನ್ ಸ್ಫೋಟದ ಕಾರಣದ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ!

Edited By : Nirmala Aralikatti
PublicNext

PublicNext

10/01/2022 05:54 pm

Cinque Terre

31.91 K

Cinque Terre

0

ಸಂಬಂಧಿತ ಸುದ್ದಿ