ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಈ 'ಚೆಂಬು' ವಿದ್ಯುತ್ ಸ್ವಾವಲಂಬಿ!; ಗ್ರಾಮಸ್ಥರ 'ಪವರ್' ಎಲ್ಲರಿಗೂ ಮಾದರಿ

ಕೊಡಗು: ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಇಂದಿಗೂ ವಿದ್ಯುತ್ತನ್ನೇ ಕಾಣದ ಹಲವು ಗ್ರಾಮ, ಕುಗ್ರಾಮಗಳು ನಮ್ಮ ದೇಶದಲ್ಲಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಹಂಚಿಕೊಂಡಿರುವ ಕೊಡಗಿನ ಚೆಂಬು ಗ್ರಾಮ ಮಾತ್ರ ಡಿಫರೆಂಟ್. ಜಲವಿದ್ಯುತ್ತನ್ನೇ ಬಳಸಿಕೊಂಡು ತಮಗೆ ಬೇಕಾದ ವಿದ್ಯುತ್ ಉತ್ಪಾದಿಸುತ್ತಿರುವ ಇಲ್ಲಿನ ಕುಟುಂಬಗಳು ಈ ಗ್ರಾಮವನ್ನು ವಿದ್ಯುತ್‍ನಲ್ಲಿ ಸ್ವಾವಲಂಬಿ ಗ್ರಾಮವನ್ನಾಗಿ ಮಾಡಿದೆ.

ಹೆಚ್ಚಾಗಿ ಅರಣ್ಯ ಪ್ರದೇಶವನ್ನೇ ಹೊಂದಿರುವ ಇಲ್ಲಿ ಸಮರ್ಪಕ ರಸ್ತೆಯಿಲ್ಲ, ವಿದ್ಯುತ್ ಕೂಡ ಇಲ್ಲ. ಈ ಗ್ರಾಮದ ಕೆಲವು ಕಡೆ ಮಾತ್ರ ವಿದ್ಯುತ್ ಸಂಪರ್ಕವಿದ್ದು, ಇನ್ನು ಕೆಲವು ಕಡೆ ವಿದ್ಯುತ್ ಕಂಬ ಹಾಕಲು ಅರಣ್ಯ ಇಲಾಖೆಯ ಆಕ್ಷೇಪವಿದೆ. ಈ ಕಾರಣದಿಂದಾಗಿ ಇಲ್ಲಿನ ಕುಟುಂಬಗಳು ಹೇರಳವಾಗಿ ಹರಿಯುವ ಜಲಧಾರೆಗಳನ್ನೇ ಬಳಸಿ, ವಿದ್ಯುತ್ ಉತ್ಪಾದಿಸಲು ತೊಡಗಿವೆ!

ಪರಿಣಾಮ ಇಲ್ಲಿನ ಶೇ. 80ಕ್ಕೂ ಮಿಕ್ಕಿ ಮನೆಗಳು ಇಂದು ಜಲವಿದ್ಯುತ್ತನ್ನೇ ವರ್ಷಪೂರ್ತಿ ಬಳಸಿಕೊಂಡು ತನ್ನ ವಿದ್ಯುತ್ ಕೊರತೆ ನೀಗಿಸಿದೆ. ಕೇಂದ್ರ, ರಾಜ್ಯ ಸರಕಾರದ ನಾನಾ ಯೋಜನೆ ಬಳಸಿಕೊಂಡು ಚೆಂಬು ಗ್ರಾಪಂ ಇಲ್ಲಿನ ಬಹುತೇಕ ಮನೆಗಳಿಗೆ ವಿದ್ಯುತ್ ಉತ್ಪಾದಿಸಲು ಬೇಕಾದ ಸಲಕರಣೆ ಕಲ್ಪಿಸಿ, ವಿದ್ಯುತ್ ಸ್ವಾವಲಂಬಿಯನ್ನಾಗಿ ರೂಪಿಸುವಲ್ಲಿ ಸಹಕಾರ ನೀಡಿದೆ.

ಬಂಡೆಗಳ ಮಧ್ಯೆ, ಹಳ್ಳಗಳಿಂದ ನೀರನ್ನು ಪೈಪ್ ಮೂಲಕ ತಮ್ಮ ಜಮೀನಿನಲ್ಲಿನ ಟ್ಯಾಂಕ್ ನಲ್ಲಿ ಸಂಗ್ರಹಿಸುವ ಗ್ರಾಮಸ್ಥರು, ಈ ನೀರನ್ನು ವಿವಿಧ ಆಕಾರದ ಪೈಪ್ ಜೋಡಿಸಿ ಟರ್ಬೈನ್ ಗೆ ಹಾಯಿಸುತ್ತಾರೆ. ನೀರಿನ ರಭಸಕ್ಕೆ ಟರ್ಬೈನ್ ತಿರುಗಿ, ಜನರೇಟರ್ ಮೂಲಕ ವಿದ್ಯುತ್ ಉತ್ಪಾದನೆಯಾಗುತ್ತದೆ. 1 ಕೆ.ವಿ., 2.ಕೆ.ವಿ. ಹೀಗೆ ವಿದ್ಯುತ್ ಉತ್ಪಾದಿಸಿ, ದಿನದ 24 ಗಂಟೆಯೂ ಯಾವುದೇ ಅಡಚಣೆಗಳಿಲ್ಲದೆ ವಿದ್ಯುತ್ ಪಡೆಯುತ್ತಿದ್ದೇವೆ ಎನ್ನುತ್ತಾರೆ ಚೆಂಬು ಗ್ರಾಮಸ್ಥ ಉದಯ್ ಕುಮಾರ್.

Edited By : Manjunath H D
PublicNext

PublicNext

12/12/2021 03:31 pm

Cinque Terre

47.62 K

Cinque Terre

2