ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿನಾಕ ರಾಕೆಟ್ ವ್ಯವಸ್ಥೆ ಪರೀಕ್ಷೆ ಯಶಸ್ವಿ

ರಾಜಸ್ಥಾನ: ಭಾರತ-ನಿರ್ಮಿತ ಪಿನಾಕ ರಾಕೆಟ್ ವ್ಯವಸ್ಥೆಯ ವಿಸ್ತರಿತ ವ್ಯಾಪ್ತಿಯ ಪರೀಕ್ಷೆ ಯಶಸ್ವಿಯಾಗಿದೆ. ರಾಜಸ್ತಾನದ ಪೋಕ್ರಾನ್ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು. ಫೈರಿಂಗ್ ರೇಂಜ್ ನ ಎಲ್ಲಾ ಹಂತಗಳಲ್ಲೂ ಪಿನಾಕಾ ರಾಕೆಟ್ ಸಿಸ್ಟಂ ಯಶಸ್ವಿಯಾಗಿದ್ದು ನಿರೀಕ್ಷಿತ ಫಲಿತಾಂಶ ದೊರೆತಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. ರಾಕೆಟ್ ವ್ಯವಸ್ಥೆಗೆ ಸಂಬಂಧಿಸಿದ ತಂತ್ರಜ್ಙಾನವನ್ನು ಖಾಸಗೀ ಸಂಸ್ಥೆಗೆ ಡಿಆರ್ಡಿಒ ವರ್ಗಾಯಿಸಿತ್ತು. ಇನ್ನು ಪಿನಾಕಾ ಇಆರ್ ರಾಕೆಟ್ ವ್ಯವಸ್ಥೆ ಎಷ್ಟು ದೂರ ಸಾಗಬಲ್ಲದು ಎಂಬ ಬಗ್ಗೆ ಸಚಿವಾಲಯ ಬಹಿರಂಗಪಡಿಸಿಲ್ಲ.

Edited By : Nagesh Gaonkar
PublicNext

PublicNext

11/12/2021 10:26 pm

Cinque Terre

36.66 K

Cinque Terre

1