ನವದೆಹಲಿ:ಟ್ವಿಟರ್ ಲೋಕಕ್ಕೆ ಭಾರತೀಯ ಪರಾಗ್ ಅಗರವಾಲ್ ಸಿಇಓ ಆಗಿದ್ದೇ ತಡ. ಇಡೀ ಟ್ವಿಟರ್ ಲೋಕದ ಸೆಲೆಬ್ರಿಟಿಗಳ ಫಾಲೋವರ್ಸ್ ಸಂಖ್ಯೆ ದಿಢೀರ್ ಅಂತ ಕಡಿಮೆ ಆಗಿದೆ. ಯಾಕೆ ಅಂತ ಹೇಳ್ತಿವಿ ಬನ್ನಿ.
ಟ್ವಿಟರ್ ನ್ನ ಎಲ್ಲರೂ ಈಗ ಬಳಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ,ರಾಹುಲ್ ಗಾಂಧಿ, ಅಮಿತಾಭ್ ಬಚ್ಚನ್, ಹೀಗೆ ಇನ್ನೂ ಅನೇಕರು ಇಲ್ಲಿದ್ದಾರೆ. ಆದರೆ ಈಗ ಇವರ ಫಾಲೋವರ್ಸ್ ಸಂಖ್ಯೆ ಸಡನ್ ಆಗಿ ಕಡಿಮೆ ಆಗಿದೆ.
ಇದಕ್ಕೆ ಕಾರಣ ಸಿಂಪಲ್ ಆಗಿಯೇ ಇದೆ. ಟ್ವಿಟರ್ ಸಿಇಓ ಪರಾಗ್ ಹೊಸ ನಿಯಮ ಜಾರಿಗೆ ತಂಗಿದ್ದಾರೆ. ನಕಲಿ ಫಾಲೋವರ್ಸ್ ಇರುತ್ತಾರೆ ಅಲ್ಲವೇ ಅಂತಹ ನಕಲಿ ಫಾಲೋ ಮಾಡೋ ಬ್ಯಾಟ್ ಗಳನ್ನ ಕ್ಲೀನ್ ಮಾಡುವ ಕೆಲಸ ಕೈಗೊಂಡಿದ್ದಾರೆ. ಅದಕ್ಕೇನೆ ಸೆಲೆಬ್ರಿಟಿಗಳ ಲಕ್ಷ ಲಕ್ಷ ಫಾಲೋವರ್ಸ್ ಸಂಖ್ಯೆ ಕಡಿಮೆ ಆಗಿದೆ.
ಇದರಿಂದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠಾ ಮುಖರ್ಜಿ 3 ಸಾವಿರ ಫಾಲೊವರ್ಸ್ ಗಳನ್ನ ಕಳೆದುಕೊಂಡಿದ್ದಾರೆ.ಮಹಿಳಾ ಲೇಖಕಿ ಶೆಫಾಲಿ ವೈದ್ಯ 800 ಫಾಲೋವರ್ಸ್ ಗಳನ್ನು ಕಳೆದುಕೊಂಡಿದ್ದಾರೆ.
ಸದ್ಯ ಪರಾಗ್ ನಕಲಿ ಫಾಲೋವರ್ಸ್ ಗಳನ್ನು ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದಾರೆ.ಹೊಸ ಹೊಸ ರೂಲ್ಸ್ ಗಳನ್ನ ತೆಗೆದುಕೊಂಡು ಬಂದಿದ್ದಾರೆ.ಇದರಿಂದ ಟ್ವಿಟರ್ ಲೋಕ ಮೊದಲಿನಷ್ಟು ಸರಳವೂ ಅಲ್ಲ.ಸುಲಭವೂ ಅಲ್ಲ.
PublicNext
03/12/2021 01:19 pm