ಬೆಂಗಳೂರು: ಬೆಂಗಳೂರು ಉತ್ತರ ತಾಲೂಕು ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರತಿಷ್ಠಿತ 'ಗ್ರೀನ್ ಎಕ್ಸ್ ಪೋ' ಹಸಿರು ವಾಹನಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಚಾಲನೆ ನೀಡಿದರು.
ಬಳಿಕ ಗುರೂಜಿಯವರು ವಿನೂತನ ತಂತ್ರಜ್ಞಾನ ಅಳವಡಿಕೆಯ ಎಲೆಕ್ಟ್ರಿಕ್ ಮತ್ತು ಹೈಬ್ರೀಡ್ ವಾಹನಗಳನ್ನು ವೀಕ್ಷಿಸಿದರು. ಇಂದಿನಿಂದ ಮೂರು ದಿನಗಳ ಕಾಲ ನಡೆಯೋ ಈ 'ಗ್ರೀನ್ ಎಕ್ಸ್ ಪೋ'ದಲ್ಲಿ ಹಲವು ಕೈಗಾರಿಕೆ ಘಟಕಗಳ ಉದ್ಯಮಿಗಳು ಪಾಲ್ಗೊಂಡಿದ್ದರು. ಸುಮಾರು 80ಕ್ಕೂ ಹೆಚ್ಚು ಸ್ಟಾಲ್ ಗಳಲ್ಲಿ ವಿನೂತನ ತಂತ್ರಜ್ಞಾನ ಉಳ್ಳ ಬ್ಯಾಟರಿಗಳು, ಜಿಪಿಎಸ್ ಸೇರಿದಂತೆ ಹಲವು ಬಗೆಯ ಉತ್ಪನ್ನಗಳ ಪ್ರದರ್ಶನವಿತ್ತು.
ಎಫ್ ಕೆಸಿಸಿಐ ಅಧ್ಯಕ್ಷ ಐ.ಎಸ್. ಪ್ರಸಾದ್, ಆಟೋ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ರಹಮತುಲ್ಲಾ ಸಹಿತ ಹಲವು ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.
PublicNext
27/11/2021 05:42 pm