ಪ್ರಸ್ತುತ ಎಲ್ಲವೂ ಡಿಜಿಟಲ್ ಕಾಲ ಇಲ್ಲಿ ನಮಗೆ ಪಾಸ್ ವರ್ಡ್ ಗಳೇ ಬೀಗದ ಕೈ. ಹಾಗಾಗಿ ಪ್ರತಿಯೊಂದಕ್ಕೂ ಪಾಸ್ ವರ್ಡ್ ಸೆಟ್ ಮಾಡಲೇಬೇಕು. ಸದ್ಯ ನಮ್ಮ ಭಾರತೀಯರು ಅತೀ ಹೆಚ್ಚು ಬಳಸುವ ಪಾಸ್ ವರ್ಡ್ ಯಾವುದೆಂದು ವೈರಲ್ ಆಗಿದೆ.
ಜೀವನದಲ್ಲಿ ಹುಡುಗನೊಬ್ಬನಿಗೆ ಪ್ರೀತಿಸಿದ ಹುಡುಗಿ ಸಿಕ್ಕರೆ ಅವಳು ಅವನಿಗೆ ಹೆಂಡತಿ ಆಗುತ್ತಾಳೆ, ಸಿಗದೇ ಇದ್ದರೆ ಇಮೇಲ್ ಪಾಸ್ ವರ್ಡ್ ಆಗ್ತಾಳೆ ಅನ್ನೋದು ಎಲ್ಲರಿಗೂ ಗೊತ್ತಿರುವ ಜೋಕು ಎಲ್ಲರೂ ತಮ್ಮ ತಮ್ಮ ಪಾಸ್ ವರ್ಡ್ ಗಳಲ್ಲಿ ಹೀಗೆ ವೈಯಕ್ತಿಕ ವಿಷಯಗಳ ಲಿಂಕ್ ಇಟ್ಟುಕೊಳ್ಳೋದು ಕಾಮನ್.
ಆದರೂ ಕೂಡ ಕೆಲವರು ಸಿದ್ಧ ಪಾಸ್ ವರ್ಡ್ ಗಳ ಮೊರೆ ಹೋಗುತ್ತಾರೆ. ಎಂದು ಸರ್ವೇಯೊಂದು ಹೇಳಿದೆ.
ನಾರ್ಡ್ ಪಾಸ್ ನ ಸಂಶೋಧನೆಯ ಪ್ರಕಾರ, ಭಾರತದಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸುವ ಪಾಸ್ ವರ್ಡ್ ಅಂದ್ರೆ 'ಪಾಸ್ ವರ್ಡ್' ಎನ್ನುವ ಪದವಂತೆ. ಭಾರತೀಯರಿಂದ ಎರಡನೇ ಅತಿ ಹೆಚ್ಚು ಮೆಚ್ಚಿನ ಪಾಸ್ ವರ್ಡ್ '12345' ಆಗಿದೆ. ಇದನ್ನು ಕ್ರ್ಯಾಕ್ ಮಾಡಲು ಕೂಡಾ ಒಂದು ಸೆಕೆಂಡ್ ಸಾಕು.
ಭಾರತೀಯರು ಬಳಸುವ ಪಾಸ್ ವರ್ಡ್ ಗಳು
'ಪಾಸ್ ವರ್ಡ್' ನಂತರ, ಭಾರತೀಯರು ಬಳಸುವ ಕೆಲವು ಸಾಮಾನ್ಯ ಪಾಸ್ ವರ್ಡ್ ಗಳು 'india123', 'xxx', 'iloveyou', 'krishna' ಮತ್ತು 'omsairam'. ಬಹಳಷ್ಟು ಜನರು ತಮ್ಮ ಹೆಸರನ್ನೇ ಪಾಸ್ ವರ್ಡ್ ಆಗಿ ಬಳಸಲು ಇಷ್ಟಪಡುತ್ತಾರೆ. 'iloveyou' ಅನ್ನು ಮಹಿಳೆಯರು ಹೆಚ್ಚು ಬಳಸುತ್ತಾರೆ ಎಂದು ಡೇಟಾ ಬಹಿರಂಗಪಡಿಸಿದೆ.
PublicNext
20/11/2021 06:22 pm