ಅಹಮದಾಬಾದ್: ದೇಶದಲ್ಲಿ ಮೊದಲಬಾರಿಗೆ ಐವಿಎಫ್ ತಂತ್ರಜ್ಞಾನದಡಿ ಗರ್ಭ ಧರಿಸಿದ್ದ 'ಬನ್ನಿ' ತಳಿಯ ಎಮ್ಮೆ ಗಂಡು ಕರುವಿಗೆ ಜನ್ಮನೀಡಿದೆ. ಅಹಮದಾನಾದ್ ಜಿಲ್ಲೆಯ ಗಿರ್ ಸೋಮನಾಥ್ ಜಿಲ್ಲೆಯ ರೈತ ವಿನಯ್ ಎಲ್ ವಾಲಾ ಅವರ ಮನೆಯ ಎಮ್ಮೆ ಇದಾಗಿದೆ. ಈ ತಳಿಯ ಎಮ್ಮೆಗಳು ಗುಜರಾತ್ ನ ಕುಛ್ ಪ್ರಾಂತ್ಯದಲ್ಲಿ ಹೆಚ್ಚು ಕಂಡುಬರಲಿವೆ. ಹಾಲಿನ ಉತ್ಪಾದನೆ ವೃದ್ಧಿಗೆ, ಗುಣಮಟ್ಟದ ತಳಿಯ ಎಮ್ಮೆಗಳ ಸಂತತಿ ಹೆಚ್ಚಿಸಲು ಐವಿಎಫ್ ತಂತ್ರಜ್ಞಾನದ ಮೊರೆ ಹೋಗಲಾಗಿತ್ತು.
'ಬನ್ನಿ' ತಳಿಯ ಎಮ್ಮೆಗಳು ಸ್ಥಿತಿಸ್ಥಾಪಕತ್ವ, ಹೆಚ್ಚಿನ ಹಾಲು ಉತ್ಪಾದನೆಗೆ ಹೆಸರಾಗಿವೆ. ಇದು, ಐವಿಎಫ್ ಕ್ರಮದಲ್ಲಿ ಜನಿಸಿದ ಮೊದಲ ಕರು ಎಂದು ಕೇಂದ್ರ ಪಶುಸಂಗೋಪನೆ, ಮೀನುಗಾರಿಕೆ ಸಚಿವಾಲಯ ಟ್ವೀಟ್ ಮಾಡಿದೆ. 'ಬನ್ನಿ ಮತ್ತು ಮುರ್ ರಾ ತಳಿಗಳು ಹೆಚ್ಚು ಹಾಲು ನೀಡುತ್ತವೆ. ಕಡಿಮೆ ಮೇವು ಸೇವಿಸಿಯೂ ನಿಯಮಿತವಾಗಿ 9-12 ಲೀಟರ್ ಹಾಲು ನೀಡುತ್ತಿವೆ.
PublicNext
23/10/2021 06:11 pm