ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೆ ಕೈ ಕೊಟ್ತಾ ಫೇಸ್‌ಬುಕ್‌?

ನವದೆಹಲಿ: ಫೇಸ್‌ಬುಕ್‌ ಸಮಸ್ಯೆ ಕಿರಿಕಿರಿ ಮತ್ತೆ ಕಾಣಿಸಿಕೊಂಡಿದ್ದು, ಬಳಕೆದಾರರು ಟ್ವಿಟ್ಟರ್‌ನಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.

ಅಕ್ಟೋಬರ್ 4 (ಸೋಮವಾರ) ರಾತ್ರಿ 9 ಗಂಟೆಗೆ ಸೇವೆ ಸ್ಥಗಿತಗೊಳಿಸಿದ್ದ ಫೇಸ್‌ಬುಕ್, ವಾಟ್ಸಾಪ್, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಂಗಳು ಮತ್ತೆ ಆರಂಭವಾಗಿದ್ದು ಮಂಗಳವಾರ ಬೆಳಗ್ಗೆ 4:45ರ ಸುಮಾರಿಗೆ. ಇದರಿಂದಾಗಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಕೇನ್‌ಬರ್ಗ್ ಭಾರೀ ನಷ್ಟವನ್ನು ಸಹ ಅನುಭವಿಸಿದ್ದಾರೆ. ಆದರೆ ಇಂದು ಬೆಳಗ್ಗೆ 9:30ರ ಸುಮಾರಿಗೆ ಫೇಸ್‌ಬುಕ್‌ ಸರಿಯಾಗಿ ವರ್ಕ್‌ ಆಗದೆ ಇರುವುದರಿಂದ ಬಳಕೆದಾರರು ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

06/10/2021 09:48 am

Cinque Terre

47.5 K

Cinque Terre

7

ಸಂಬಂಧಿತ ಸುದ್ದಿ