ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6 ಗಂಟೆಗಳ ಬಳಿಕ ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾ ಸೇವೆ ಪುನಾರಂಭ- ಕ್ಷಮೆ ಕೋರಿದ ಸಂಸ್ಥೆ

ನವದೆಹಲಿ: ಭಾರತೀಯ ಕಾಲಮಾನ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ವಿಶ್ವದಾದ್ಯಂತ ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆದ ಪರಿಣಾಮ ಬಳಕೆದಾರರು ಪರದಾಡುವಂತಾಗಿತ್ತು. ಇವು ಬರೋಬ್ಬರಿ 6 ಗಂಟೆಗಳ ಬಳಿಕ ತಮ್ಮ ಸೇವೆಯನ್ನು ಪುನಾರಂಭಿಸಿವೆ.

ನಿನ್ನೆ ರಾತ್ರಿಯಿಂದ ವಾಟ್ಸಾಪ್​ ಹಾಗೂ ಫೇಸ್​ಬುಕ್​ ಮೆಸೆಂಜರ್​ಗಳಿಂದ ಯಾರಿಗೂ ಸಂದೇಶ ಕಳಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೆ ಯಾರ ಮೆಸೇಜ್​ಗಳೂ ರಿಸೀವ್​ ಆಗುತ್ತಿರಲಿಲ್ಲ. ಈ ಸಂಬಂಧ ಜಾಗತಿಕವಾಗಿ 10.6 ಮಿಲಿಯನ್ ದೂರುಗಳು ದಾಖಲಾಗಿವೆ. ಇದುವರೆಗೆ ಕಂಡಂತಹ ದೊಡ್ಡ ವೈಫಲ್ಯ ಎಂದು ವೆಬ್‌ಸೈಟ್ ಮಾನಿಟರಿಂಗ್ ಗ್ರೂಪ್ ಡೌನ್‌ಡೆಟೆಕ್ಟರ್ ಹೇಳಿದೆ.

ಈ ಕುರಿತು ವಾಟ್ಸ್ ಆ್ಯಪ್ ಸಂಸ್ಥೆ ಬಳಕೆದಾರರ ಬಳಿ ಕ್ಷಮೆ ಕೇಳಿದ್ದು, ಹಲವು ಗಂಟೆಗಳು ಕಾರ್ಯ ಸ್ಥಗಿತಗೊಂಡಾಗ ತಾಳ್ಮೆಯಿಂದ ವಹಿಸಿದ್ದಕ್ಕೆ ಧನ್ಯವಾದ ತಿಳಿಸಿದೆ.

Edited By : Vijay Kumar
PublicNext

PublicNext

05/10/2021 07:25 am

Cinque Terre

52.51 K

Cinque Terre

0