ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವದಾದ್ಯಂತ ಕೈಕೊಟ್ಟ ವಾಟ್ಸಾಪ್, ಇನ್‌ಸ್ಟಾಗ್ರಾಮ್, ಫೇಸ್‍ಬುಕ್

ನವದೆಹಲಿ: ವಿಶ್ವದಾದ್ಯಂತ ಮೆಸೇಜಿಂಗ್​ ಆ್ಯಪ್​ಗಳಾದ ವಾಟ್ಸಾಪ್​, ಫೇಸ್​ಬುಕ್​ ಮೆಸೆಂಜರ್​ ಹಾಗೂ ಇನ್‌ಸ್ಟಾಗ್ರಾಮ್ ಗಳ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಅಸಮಾಧಾನ ಹೊರ ಹಾಕಿದ್ದಾರೆ.

ವಾಟ್ಸಾಪ್​ ಹಾಗೂ ಫೇಸ್​ಬುಕ್​ ಮೆಸೆಂಜರ್​ಗಳಿಂದ ಯಾರಿಗೂ ಸಂದೇಶ ಕಳಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೆ ಯಾರ ಮೆಸೇಜ್​ಗಳೂ ರಿಸೀವ್​ ಆಗುತ್ತಿರಲಿಲ್ಲ ಎಂದು ಅನೇಕ ಗ್ರಾಹಕರು ಟ್ವಿಟರ್ ನಲ್ಲಿ ದೂರಿದ್ದಾರೆ. ಸದ್ಯ ಟ್ವಿಟರ್ ನಲ್ಲಿ ವಾಟ್ಸಾಪ್ ಟ್ರೆಂಡಿಂಗ್ ನಲ್ಲಿದೆ.

ಈ ಎಲ್ಲ ಆ್ಯಪ್​ಗಳೂ ಫೇಸ್​ಬುಕ್​ ಒಡೆತನದಲ್ಲೇ ಇವೆ. ಇನ್ನು ಆ್ಯಪ್​ಗಳು ಸ್ಥಗಿತಗೊಳ್ಳಲು ಸ್ಪಷ್ಟವಾದ ಕಾರಣ ಏನು ಎಂಬುದನ್ನು ಫೇಸ್‍ಬುಕ್ ತಿಳಿಸಿಲ್ಲ.

Edited By : Vijay Kumar
PublicNext

PublicNext

04/10/2021 09:37 pm

Cinque Terre

183.86 K

Cinque Terre

31