ನವದೆಹಲಿ: ಅಮೆರಿಕ ಮೂಲದ ವೆಬ್ ಸೇವಾ ಪೂರೈಕೆದಾರ ಯಾಹೂ ಇಂದಿನಿಂದ ಭಾರತದಲ್ಲಿ ತನ್ನ ಸುದ್ದಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.
ಯಾಹೂ ಸಂಸ್ಥೆ ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಆ. 26 ರಿಂದ ಯಾವುದೇ ಹೊಸ ವಿಷಯಗಳನ್ನು ಪ್ರಕಟಿಸುವುದಿಲ್ಲ. ಆದರೆ ಸುದ್ದಿ ಪ್ರಕಟಿಸದೇ ಇರುವುದರಿಂದ ಯಾಹೂ ಮೇಲ್ ಮೇಲೆ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ ಎಂದು ತಿಳಿಸಿದೆ.
ಯಾಹೂ ಖಾತೆ, ಮೇಲ್, ಸರ್ಚ್ ಎಂಜಿನ್‌ಗಳು ಈ ಹಿಂದಿನಂತೆಯೇ ಕಾರ್ಯ ನಿರ್ವಹಿಸಲಿವೆ. ಈ ವರೆಗೆ ಭಾರತದಲ್ಲಿ ನಮಗೆ ಬೆಂಬಲ ನೀಡಿದವರು, ಓದುಗರಿಗೆ ಧನ್ಯವಾದಗಳು ಎಂದು ಹೇಳಿದೆ. ಭಾರತದಲ್ಲಿನ ಹೊಸ ನಿಯಂತ್ರಕ ಕಾನೂನುಗಳ ಬದಲಾವಣೆಗಳಿಂದ ಯಾಹೂ ಈ ನಿರ್ಧಾರ ಕೈಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
PublicNext
26/08/2021 09:56 pm