ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಂದ್ರನ ಮೇಲೆ ನೀರು ಪತ್ತೆ: ಇಸ್ರೋ ವಿಜ್ಞಾನಿಗಳ ಸಂಶೋಧನೆ

ನವದೆಹಲಿ: ಚಂದ್ರಯಾನ-2 ಪತನಗೊಂಡಿದ್ದು ಇಡೀ ದೇಶಕ್ಕೆ ಗೊತ್ತಿದೆ. ಆದರೆ ಚಂದ್ರನ ಸುತ್ತ ಈಗಲೂ ಸುತ್ತುತ್ತಿರುವ ನೌಕೆ ತನ್ನಲ್ಲಿರುವ ವೈಜ್ಞಾನಿಕ ಉಪಕರಣಗಳ ಮೂಲಕ ಚಂದ್ರ ಮೇಲೆ ನೀರು ಇರುವುದನ್ನು ಖಚಿತಪಡಿಸಿದೆ.

ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಮುಂಬರುವ ಚಂದ್ರಯಾನ-3 ಯೋಜನೆಯತ್ತ ಆಶಾಭಾವದ ನೋಟ ಬೀರಿದ್ದಾರೆ. ಚಂದ್ರನ ಸುತ್ತ ಸುತ್ತುತ್ತಿರುವ ಗಗನನೌಕೆಯಲ್ಲಿನ ಇನ್ ಫ್ರಾರೆಡ್ ಸ್ಪೆಕ್ಟ್ರೊಮೀಟರ್ ಉಪಕರಣ ಚಂದ್ರನ ಮೇಲಿನ ಖನಿಜಗಳ ಅಧ್ಯಯನಕ್ಕೆಂದೇ ಅಭಿವೃದ್ಧಿಗೊಳಿಸಲಾಗಿತ್ತು. ಇದೇ ಉಪಕರಣ ಈಗ ಹೈಡ್ರಾಕ್ಸಿಲ್ ಮತ್ತು ನೀರಿನ ಕಣಗಳನ್ನು ಚಂದಿರನ ನೆಲದಲ್ಲಿ ಪತ್ತೆ ಹಚ್ಚಿದೆ.

ಚಂದ್ರಯಾನ-3 ಯೋಜನೆ 2022ರಲ್ಲಿ ಕಾರ್ಯಗತಗೊಳ್ಳಲಿದೆ. ಮುಂದಿನ ವರ್ಷಗಳಲ್ಲಿ ಹಲವು ದೇಶಗಳೂ ಚಂದ್ರನಲ್ಲಿಗೆ ಮಾನವ ಸಹಿತ ಮತ್ತು ಮಾನವ ರಹಿತ ಬಾಹ್ಯಾಕಾಶ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯ ನೂತನ ಸಂಶೋಧನೆ ಮಹತ್ವಪೂರ್ಣವಾದುದು.

Edited By : Nagaraj Tulugeri
PublicNext

PublicNext

12/08/2021 08:04 pm

Cinque Terre

28.02 K

Cinque Terre

2

ಸಂಬಂಧಿತ ಸುದ್ದಿ