ಬೆಂಗಳೂರು: ಫೆ.3 ರಿಂದ 5 ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಷ್ಠಿತ 'ಏರೋ ಇಂಡಿಯಾ 2021' ಪ್ರದರ್ಶನದಲ್ಲಿ ತನ್ನ ಸುಧಾರಿತ, ಸುಸ್ಥಿರ ವೈಮಾನಿಕ ತಂತ್ರಜ್ಞಾನಗಳು ಹಾಗೂ ಸೇವೆಗಳನ್ನು ಪ್ರದರ್ಶಿಸಲು ಏರ್ ಬಸ್ ಸಂಸ್ಥೆ ಸಜ್ಜಾಗಿದೆ.
ಪ್ರದರ್ಶನದ ಹಾಲ್ ಬಿ ಯಲ್ಲಿ ಸ್ಟ್ಯಾಂಡ್ ಬಿ .2.6 ನಲ್ಲಿ ಏರ್ ಬಸ್ ಉತ್ಪನ್ನಗಳು ಪ್ರದರ್ಶನಗೊಳ್ಳಲಿದೆ. ಇದರಲ್ಲಿ ಸಿ 295 - ಮಧ್ಯಮ ಸಾರಿಗೆ ವಿಮಾನದ ಸ್ಕೇಲ್ ಮಾದರಿ ಮತ್ತು ಎ 330 ಎಂಆರ್ ಟಿಟಿ - ಮಲ್ಟಿ-ರೋಲ್ ಟ್ಯಾಂಕರ್ ಟ್ರಾನ್ಸ್ ಪೋರ್ಟ್ (ಎಂಆರ್ ಟಿಟಿ) ವಿಮಾನದ ಡಿಜಿಟಲ್ ಪ್ರದರ್ಶನ ಇರುತ್ತದೆ. ಹೆಲಿಕಾಪ್ಟರ್ ಗಳಿಂದ ಹಿಡಿದು H225M ನ ಸ್ಕೇಲ್ ಮಾದರಿಗಳು, ಯುದ್ಧವಿಶೇಷ ಬಹುಪಯೋಗಿ ಹೆಲಿಕಾಪ್ಟರ್ ಮತ್ತು ಎಲ್ಲಾ ಹವಾಮಾನಕ್ಕೆ ಸೂಕ್ತವಾಗುವ ಬಹುಪಾತ್ರ ಬಲದ ಗುಣಕ ಎಎಸ್565ಎಂಬಿಇ ಪ್ಯಾಂಥರ್ ಇರಲಿವೆ.
ಇದರ ವಿಶೇಷ ಆಕರ್ಷಣೆಯೆಂದರೆ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿರುವ ಎಸ್ 850 ರಾಡಾರ್, ವ್ಯಾಪಕವಾದ ಎಸ್ ಎಆರ್ ಸಾಮರ್ಥ್ಯಗಳನ್ನು ನೀಡುವ ಈ ಉನ್ನತ ಶಕ್ತಿಯ ಉಪಗ್ರಹದಲ್ಲಿ ಹೆಚ್ಚಿನ ಸಂಖ್ಯೆಯ ಗುರಿಗಳ ಮೇಲ್ವಿಚಾರಣೆ ಮತ್ತು ಆಗಾಗ್ಗೆ ಪುನರಾವರ್ತನೆಗಳು ಮತ್ತು ಒಂದೇ ಪಾಸ್ ನಲ್ಲಿ ವರ್ಧಿತ ಕಾರ್ಯಕ್ಷಮತೆ ಇರುತ್ತದೆ.
ಏರ್ ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲ್ಲಾರ್ಡ್, ''ಏರೋ ಇಂಡಿಯಾದಲ್ಲಿ "ಏರ್ ಬಸ್" ಭಾಗವಹಿಸುವಿಕೆಯು ಭಾರತೀಯ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ತ್ವರಿತ ಆಧುನೀಕರಣ ಮತ್ತು ದೇಶೀಕರಣಕ್ಕೆ ನಮ್ಮ ಬದ್ಧತೆಯ ಪ್ರದರ್ಶನವಾಗಿದೆ.
PublicNext
20/01/2021 02:58 pm