2020ನೇ ಇಸ್ವಿಯನ್ನು ಮಾನವ ಇತಿಹಾಸದಲ್ಲಿಯೇ ಮರೆಯಲಾಗದ ವರ್ಷವೆಂದು ಹೇಳಬಹುದು.
ಡೆಡ್ಲಿ ವೈರಸ್ ಹೊತ್ತು ತಂದ ಈ ವರ್ಷದಲ್ಲಿ ಜನ ನರಕಯಾತನೆ ಅನುಭವಿಸಿದ್ದಾರೆ.
ಈ ವರ್ಷ ಕಳೆಯಲು ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಜನ ಬರುವ ವರ್ಷ ಯಾವುದೇ ಭಯಾನಕ ದಿನಗಳು ಬಾರದರಲೆಂದು ಪ್ರಾರ್ಥನೆ ಮಾಡುತ್ತಲೇ 2021 ನೇ ವರ್ಷವನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ.
ಇದರ ಮಧ್ಯೆ ಗೂಗಲ್ ಡೂಡಲ್ 2021ನ್ನ ಬರಮಾಡಿಕೊಳ್ಳು ಸಜ್ಜಾಗಿದೆ.
ಗೂಗಲ್ ಲೋಗೋದಲ್ಲಿ ಗಡಿಯಾರದ ಆಕೃತಿಯನ್ನ ಅಳವಡಿಸಿದೆ.
ಮನೆಯ ಆಕಾರದ ಒಳಗೆ ಗಡಿಯಾರದ ಆಕೃತಿ ಹಾಗೂ ಸಂಪೂರ್ಣ ಲೋಗೋವನ್ನ ಲೈಟಿನ ಮಾಲೆಯಲ್ಲಿ ಅಲಂಕರಿಸಿದ ರೀತಿಯಲ್ಲಿ ಚಿತ್ರಿಸಲಾಗಿದೆ.
ಇನ್ನು ಇದರ ಜೊತೆಯಲ್ಲಿ ಗೂಗಲ್ ಬಳಕೆದಾರರಿಗೆ ಮಿನಿ ಗೇಮ್ ಒಂದನ್ನೂ ಗೂಗಲ್ ಅಳವಡಿಸಿದೆ.
ಗೂಗಲ್ ಲೋಗೋ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಕೋನಿನ ಆಕಾರದ ಆಕೃತಿಯೊಂದು ಕಾಣಸಿಗುತ್ತೆ.
ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಗೂಗಲ್ ಪೇಜ್ ತುಂಬಾ ಬಣ್ಣದ ಬಣ್ಣದ ಆಕೃತಿ ಚಿಮ್ಮಿದಂತೆ ಭಾಸವಾಗುತ್ತೆ.
ಈ ಮೂಲಕ ಯಾವುದೇ ಪಾರ್ಟಿಯಲ್ಲಿ ಭಾಗಿಯಾಗದೇ ಮನೆಯಲ್ಲೇ ಕೂತು ಹೊಸ ವರ್ಷಕ್ಕೆ ಕಾಯುತ್ತಿರುವ ಮಂದಿಗೆ ಗೂಗಲ್ ಪಾರ್ಟಿ ಕಿಕ್ ನೀಡಿದೆ.
PublicNext
31/12/2020 01:47 pm